ಮೂರು ಗಂಟು, 6 ಮದುವೆಗಳು: ಕೊನೆಗೆ ಸಿಕ್ಕಿಬಿದ್ದಳು ಖತರ್ನಾಕ್ ಸುಂದರಿ!

Public TV
3 Min Read
CHEATER BRIDE

ಹೈದರಾಬಾದ್: ನೋಡೋಕೆ ಸುಂದರವಾಗಿದ್ದ ಐನಾತಿ ಸುಂದರಿಯೊಬ್ಬಳು ಬರೋಬ್ಬರಿ ಆರು ಬಾರಿ ಮದುವೆಯಾಗಿ, ಈಗ ಪೊಲೀಸರಿಗೆ ಅತಿಥಿಯಾಗಿದ್ದಾಳೆ.

ಪ್ರಕಾಶಂ ಜಿಲ್ಲೆಯ ಮಾದಿನಿಪುರಂ ಗ್ರಾಮದ ನಿವಾಸಿಯಾಗಿರುವ ಅನಂತರೆಡ್ಡಿ ಮಗಳು ಮೌನಿಕಾ ಆರು ಮದುವೆಗಳನ್ನ ಮಾಡಿಕೊಂಡ ಐನಾತಿ ಸುಂದರಿ.

ಈಕೆ ಮೂರು ತಿಂಗಳ ಹಿಂದೆ ಖಾಜಿಪೇಟದ ಕೊಮ್ಮಲೂರು ಗ್ರಾಮದ ನಿವಾಸಿ ರಾಮಕೃಷ್ಣಾರೆಡ್ಡಿ ಎಂಬುವವರ ಜೊತೆ ಮದುವೆಯಾಗಿದ್ದಳು. ಅವಳ ಅಂದಕ್ಕೆ ಮನಸೋತಿದ್ದ ರಾಮಕೃಷ್ಣಾರೆಡ್ಡಿ ಆಕೆಯ ಕುಟುಂಬಸ್ಥರ ಬಳಿ ವರದಕ್ಷಿಣೆ ತೆಗೆದುಕೊಳ್ಳದೆ ಮತ್ತು ವಧುದಕ್ಷಿಣೆ ನೀಡಿ ಮದುವೆ ಮಾಡಿಕೊಂಡಿದ್ದರು.

Islamic marriage

ದಾಂಪತ್ಯದಲ್ಲಿ ಏನೂ ಕೊರತೆಯಿಲ್ಲದೆ ಇಬ್ಬರು ಸುಖವಾಗಿ ಜೀವನ ನಡೆಸುತ್ತಿದ್ದರು. ಆದರೆ ಆಗಸ್ಟ್ 25 ರಂದು ಮೌನಿಕಾಳ ತಂದೆ ಅನಂತರೆಡ್ಡಿ ಮಗಳನ್ನು ಊರಿಗೆ ಕರೆದೊಯ್ಯುವುದಾಗಿ ಹೇಳಿ, ಗಂಡನನ್ನ ಬಿಟ್ಟು ತಂದೆಯ ಜೊತೆ ಸ್ವಗ್ರಾಮಕ್ಕೆ ತೆರಳದೇ ಬೇರೆಡೆ ಹೊರಟಿದ್ದರು.

ಈಗಷ್ಟೆ ಮದುವೆಯಾಗಿದ್ದ ರಾಮಕೃಷ್ಣನಿಗೆ ಹೆಂಡತಿಯನ್ನ ಬಿಟ್ಟಿರಲು ಸಾಧ್ಯವಾಗದ ಕಾರಣ, ಅವಳ ತವರು ಮನೆಗೆ ಕರೆ ಮಾಡಿ ವಿಚಾರಿಸುತ್ತಾರೆ. ಆದರೆ ಅಪ್ಪ-ಮಗಳು ಊರಿನ ಬಾರದೇ ಇರುವ ವಿಷಯವನ್ನ ತಿಳಿದ ಪತಿ ಗಾಬರಿಗೊಂಡು ಎಲ್ಲೆಡೆ ಹುಡುಕಾಟ ನಡೆಸುತ್ತಾರೆ.

marriage suicide

ಪತ್ನಿಯನ್ನ ಎಷ್ಟು ಹುಡುಕಿದರೂ ಪತ್ತೆಯಾಗದ ಕಾರಣ ಕೊನೆಯಲ್ಲಿ ಪೊಲೀಸರ ಬಳಿ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರನ್ನ ನೀಡುತ್ತಾರೆ. ಈ ಸಂಬಂಧ ತನಿಖೆಯನ್ನ ಆರಂಭಿಸಿದ ಪೊಲೀಸರಿಗೆ ಪತ್ನಿ ಮೌನಿಕಳಾ ನಿಜವಾದ ರೂಪ ಬಯಲಾಗಿದೆ.

ಮೌನಿಕಾ ಪತ್ತೆಯಾಗಿದ್ದು ಹೇಗೆ?
ತನಿಖೆ ಆರಂಭಿಸಿದ ಪೊಲೀಸರು ಮೌನಿಕಾಳ ಮೊಬೈಲ್ ಫೋನ್ ಟ್ರಾಕ್ ಮಾಡುವ ಮೂಲಕ ಆಕೆಯನ್ನ ಪತ್ತೆಹಚ್ಚಿದ್ದಾರೆ. ಮೊದಲು ವಿಜಯವಾಡದಲ್ಲಿದ್ದ ಅಪ್ಪ-ಮಗಳು ನಂತರ ವಿಶಾಖಪಟ್ಟಣಂಗೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತದೆ. ವಿಶಾಖಪಟ್ಟಣಂನಿಂದ ಹೈದರಾಬಾದ್‍ಗೆ ಬಂದಿದ್ದ ಮೌನಿಕಾ, ಒಬ್ಬ ಯುವಕನ ಜೊತೆ ಇದ್ದಾಳೆಂಬ ಮಾಹಿತಿ ಮೇರೆಗೆ ಪೊಲೀಸರು ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

MARRIAGE

ಆರು ಮದುವೆಯ ಜಾಲ ಪತ್ತೆ!
ತೀವ್ರ ವಿಚಾರಣೆಯನ್ನ ನಡೆಸಿದ ಪೊಲೀಸರಿಗೆ ಮೌನಿಕಾಳಿಂದ ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ. ಈಕೆ ಪ್ರಕಾಶಂ ಜಿಲ್ಲಾ ಮಾರ್ಕಾಪುರಕ್ಕೆ ಸೇರಿದ ವ್ಯಕ್ತಿಯ ಜೊತೆ ಮೊದಲ ಮದುವೆ ಮಾಡಿಕೊಂಡಿದ್ದು, ವಿವಾಹವಾದ ಸ್ವಲ್ಪ ದಿನದ ನಂತರ ಪ್ರಕಾಶಂ ಜಿಲ್ಲಾ ಪಂದಿಲ್ಲಪಲ್ಲೆ ಗ್ರಾಮದ ವ್ಯಕ್ತಿಯ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾಳೆ.

ಇನ್ನೂ ಮೂರನೇ ಮದುವೆಯನ್ನು ಗಿದ್ದಲೂರು ಗ್ರಾಮದ ವ್ಯಕ್ತಿಯ ಜೊತೆ ಮಡಿಕೊಂಡಿದ್ದು, ತೆನಾಲಿ ಗ್ರಾಮದ ವ್ಯಕ್ತಿಯ ಜೊತೆ ನಾಲ್ಕನೇ ವಿವಾಹವಾಗಿ ಕೆಲ ದಿನ ಅವನ ಜತೆ ಸಂಸಾರ ನಡೆಸಿದ್ದಾಳೆ. ಅದಾದ ಬಳಿಕ ಅಲ್ಲಿಂದಲೂ ಕಾಲ್ಕಿತ್ತಿದ್ದ ಮೌನಿಕಾ ರಾಮಕೃಷ್ಣರೆಡ್ಡಿ ಜೊತೆ ಐದನೇ ಮದುವೆಯಾಗಿದ್ದಾಳೆ. ಈತನಿಗೂ ಕೈಕೊಟ್ಟು ಕೊನೆಯಲ್ಲಿ ವಿಜಯವಾಡಕ್ಕೆ ಹಾರಿ, ಅಲ್ಲಿಯ ಹೈದರಾಬಾದ್ ಯುವಕನನ್ನು ಬುಟ್ಟಿಗೆ ಬೀಳಿಸಿಕೊಂಡು ಅನ್ನಾವರಂನಲ್ಲಿ ಆರನೇ ಮದುವೆ ಆಗಿದ್ದಾಳೆ.

Marriage 1

ಖತರ್ನಾಕ್ ಸುಂದರಿ!
ಈ ಸುಂದರಿ ಈ ಆರು ವ್ಯಕ್ತಿಗಳೊಂದಿಗೆ ಮದುವೆಯಾಗಿ, ಕೆಲ ದಿನಗಳು ಹಾಗೂ ಕೆಲ ತಿಂಗಳುಗಳ ಕಾಲ ಸಂಸಾರ ನಡೆಸುತ್ತಿದ್ದಳು. ಬಳಿಕ ಅವರ ತಂದೆ ಆಕೆಯನ್ನು ಕರೆದೊಯ್ಯುತ್ತಿದ್ದನು. ಕರೆದೊಯ್ಯುವ ಹಿಂದಿನ ದಿನ ಮನೆಯಲ್ಲಿದ್ದ ನಗದು, ಬಂಗಾರವನ್ನು ಲಪಾಟಾಯಿಸಿ ಅಲ್ಲಿಂದ ಪರಾರಿಯಾಗುತ್ತಿದ್ದಳು. ಈ ರೀತಿ ಆರು ಜನರ ಕುಟುಂಬಸ್ಥರನ್ನ ನಂಬಿಸಿ ನಂತರ ಅವರ ಮನೆಗೆ ಕನ್ನ ಹಾಕುತ್ತಿದ್ದಳು.

ಈ ಸಂಬಂಧ ಪ್ರಕರಣವನ್ನ ಪೊಲೀಸರು ಐಪಿಸಿ ಸೆಕ್ಷನ್ 420 ಯ ಅಡಿಯಲ್ಲಿ ಮೌನಿಕಾಳಾ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ವಿಚಾರಣೆಯನ್ನ ಮುಂದುವರಿಸಿದ್ದಾರೆ.

marriage

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *