ಶಿಮ್ಲಾ: ಹಿಮಾಚಲಪ್ರದೇಶದ ಚಂಬಾ ಟೌನ್ ಹಾಗೂ ಪಂಜಾಬ್ ನ ಪಠಾಣ್ ಕೋಟ್‍ಗೆ ಸಂಪರ್ಕಿಸುವ ಸೇತುವೆ ಕುಸಿದಿರುವ ಘಟನೆ ಗುರುವಾರದಂದು ನಡೆದಿದೆ.
ಸೇತುವೆ ಕುಸಿದ ಪರಿಣಾಮ 6 ಜನರಿಗೆ ಗಾಯಗಳಾಗಿದ್ದು, ತಕ್ಷಣವೇ ಪಂಡಿತ್ ಜವಾಹರ್ ಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಸುದೇಶ್ ಕುಮಾರ್ ಮೊಖ್ತಾ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸೇತುವೆ ನಿರ್ಮಾಣ ನಕ್ಷೆಯಲ್ಲಿನ ದೋಷ ಅಥವಾ ಕಳಪೆ ಕಾಮಗಾರಿಯಿಂದ ಸೇತುವೆ ಕುಸಿದಿದೆ. ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಕ್ರಮ ಕೈಗೊಳ್ಳುತ್ತೇವೆ ಎಂದು ಸುದೇಶ್ ತಿಳಿಸಿದ್ದಾರೆ.
ಈ ಘಟನೆ ನಡೆದ ಸಮಯದಲ್ಲಿ ಒಂದು ಕಾರು, ಮಿನಿ ಟ್ರಕ್ ಮತ್ತು ಬೈಕ್ ಸೇತುವೆ ಮೇಲೆ ಚಲಿಸುತ್ತಿದ್ದವು. ಬೈಕ್ ನದಿಯೊಳಗೆ ಬಿದ್ದಿದು, ಕಾರು ಮತ್ತು ಮಿನಿ ಟ್ರಕ್ ಅಲ್ಲೆ ಸಿಲುಕಿಕೊಂಡಿವೆ.
ಈ ಸೇತುವೆಯನ್ನು 15 ವರ್ಷಗಳ ಹಿಂದೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕ್(ನಬಾರ್ಡ್) ಅಡಿ ನಿರ್ಮಿಸಲಾಗಿತ್ತು.
Six injured after a bridge collapsed in Himachal Pradesh's Chamba yesterday pic.twitter.com/bMNFiHeWmc
— ANI (@ANI) October 20, 2017