ರಣವೀರ್ ಸಿಂಗ್ ಅಭಿನಯದ ದುರಂಧರ್ ಚಿತ್ರಕ್ಕೆ ದುಷ್ಟರ ಕಾಟ ಶುರುವಾಗಿದೆ. ದುರಂಧರ್ ಚಿತ್ರಕ್ಕೆ ಬ್ಯಾನ್ ಮಾಡುವ ಬೆದರಿಕೆ ಬಂದಿದೆ. ಈ ಸಿನಿಮಾದಲ್ಲಿ ಪಾಪಿ ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡಲಾಗಿದೆ. ಹಾಗಾಗಿ ಪಾಕಿಸ್ತಾನ ಕಣ್ಣು ಕೆಂಪು ಮಾಡಿಕೊಂಡಿದೆ. ಜೊತೆಗೆ ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ತಾಕೀತು ಮಾಡಿದೆ. 6ಕ್ಕೂ ಹೆಚ್ಚು ಗಲ್ಫ್ ರಾಷ್ಟ್ರಗಳು ದುರಂಧರ್ ಪ್ರದರ್ಶನಕ್ಕೆ ಹಿಂದೇಟು ಹಾಕಿವೆ. ಈ ಮೂಲಕ ಪಾಪಿ ಪಾಕಿಸ್ತಾನವನ್ನು ಬೆಂಬಲಿಸಿವೆ.
ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡ್ತಿರುವ ದುರಂಧರ್ ಚಿತ್ರವನ್ನು ಇಡೀ ವಿಶ್ವ ಕೊಂಡಾಡುತ್ತಿದ್ದರೆ, ಗಲ್ಫ್ ರಾಷ್ಟ್ರಗಳು ಈ ಚಿತ್ರವನ್ನು ಬ್ಯಾನ್ ಮಾಡಲು ಮುಂದಾಗಿವೆ. ಯುಎಇ, ಸೌದಿ ಅರೇಬಿಯಾ ಸೇರಿದಂತೆ ಆರು ಗಲ್ಫ್ ರಾಷ್ಟçಗಳು ಚಿತ್ರಕ್ಕೆ ನಿಷೇಧ ಹೇರಿವೆ. ಈ ಮೂಲಕ ಪಾಪಿ ಪಾಕಿಸ್ತಾನದ ಬೆನ್ನಿಗೆ ನಿಂತಿವೆ. ಸಿನಿಮಾದಲ್ಲಿ ಹಲವು ನೈಜ ಘಟನೆಗಳನ್ನು ಸೇರಿಸಲಾಗಿರುವುದೇ ನಿಷೇಧಕ್ಕೆ ಕಾರಣ.
ದುರಂಧರ್ ಚಿತ್ರದ ಕಥೆಯು 1999ರಲ್ಲಿ ನಡೆದ ಕಂದಹಾರ್ ವಿಮಾನ ಅಪಹರಣ, 2001ರಲ್ಲಿ ನಡೆದ ಸಂಸತ್ತಿನ ಮೇಲಿನ ದಾಳಿ ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಗಳ ಘಟನೆಗಳನ್ನು ಆಧರಿಸಿದೆ. ಈ ಎಲ್ಲ ಘಟನೆಗಳ ಹಿಂದೆ ಇರುವವರ ಬಣ್ಣ ಬಯಲು ಮಾಡಿದೆ. ಜೊತೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯಗಳ ಮೇಲೆ ಆಧಾರಿತವಾದ ಸಿನಿಮಾ ಆಗಿದೆ. ಪಾಕಿಸ್ತಾನ ವಿರೋಧಿ ವಿಷಯವನ್ನು ಒಳಗೊಂಡಿದೆ. ಈ ಕಾರಣಕ್ಕೆ ಚಿತ್ರವನ್ನು ಈಗ ನಿಷೇಧಿಸಲಾಗಿದೆ ಎಂದು ಗಲ್ಫ್ ರಾಷ್ಟçಗಳು ಹೇಳಿಕೊಂಡಿವೆ.
ಇಡೀ ಸಿನಿಮಾ ಭಾರತದ ಗುಪ್ತಚರ ಸಂಸ್ಥೆ `ರಾ’ ಸುತ್ತ ನಡೆಯುತ್ತದೆ. ರಣ್‌ವೀರ್ ಸಿಂಗ್ ಭಾರತೀಯ ಏಜೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಪಾಕಿಸ್ತಾನದ ಕರಾಚಿಯ ಮಾಫಿಯಾ ಜಾಲವನ್ನು ಭೇದಿಸುವ ಕಾರ್ಯಾಚರಣೆಯ ಮುಖ್ಯ ಭಾಗವಾಗಿರುತ್ತಾರೆ. ಪಾಕಿಸ್ತಾನದ ಒಂದೊಂದೇ ಮುಖವನ್ನು ಬಯಲು ಮಾಡುತ್ತಾ ಹೋಗುತ್ತಾರೆ. ಇದೆಲ್ಲವೂ ನೈಜವಾಗಿದ್ದರೂ, ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಪಾಕಿಸ್ತಾನ. ತನ್ನ ಬಣ್ಣ ಬಯಲು ಮಾಡಿದ ಚಿತ್ರವನ್ನು ಮುಸ್ಲಿಂ ರಾಷ್ಟ್ರಗಳು ಬೆಂಬಲಿಸಬಾರದು ಅಂತ ಪಾಕಿಸ್ತಾನ ಅಂಗಲಾಚಿದೆ.

