ಭುವನೇಶ್ವರ: ಟ್ರಕ್‌ಗೆ (Truck) ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಒಡಿಶಾದ (Odisha) ಸುಂದರ್‌ಗಢ್ (Sundargarh) ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಹೇಮಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯಕನಪಾಲಿ ಪ್ರದೇಶದ ಬಳಿ ವ್ಯಾನ್ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಪ್ರದೇಶದಲ್ಲಿ ದಟ್ಟ ಮಂಜಿನಿಂದ ಅಪಘಾತ ಸಂಭವಿಸರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೀರ್ತನಾ ತಂಡವೊಂದರ ಸದಸ್ಯರು ಚಕ್ಕಪ್ಲೈ ಗ್ರಾಮಕ್ಕೆ ತೆರಳಿದ್ದು, ತಮ್ಮ ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಇದನ್ನೂ ಓದಿ: Madkeri | ಮಹಿಳೆ ಜೊತೆ ಸೇರಿ ಕೊಲೆ – ಸ್ಥಳ ಮಹಜರ್ ವೇಳೆ ಆರೋಪಿ ಎಸ್ಕೇಪ್
ಮೃತರು ಜಿಲ್ಲೆಯ ಕಂದಗೋಡ ಮತ್ತು ಸಮರ್ಪಿಂಡ ಗ್ರಾಮಗಳಿಗೆ ಸೇರಿದವರು ಎಂದು ವರದಿಗಳು ತಿಳಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸ್ಥಳೀಯರು ರಸ್ತೆ ತಡೆ ನಡೆಸಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ| 3ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಮೃತದೇಹ ಹೊಲದಲ್ಲಿ ಹೂತುಹಾಕಿದ ಸಂಬಂಧಿ