ಬೆಂಗಳೂರು: ಐದು ವರ್ಷ, ನಲವತ್ತು ಕೋಟಿ. ಕುಂಟುತ್ತಾ ಸಾಗುತ್ತಿದ್ದ ಶಿವಾನಂದ ಸ್ಟೀಲ್ ಬ್ರಿಡ್ಜ್ ಮೊನ್ನೆ ಮೊನ್ನೆ ತಾನೇ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಮಾಡಿತ್ತು. ಬೆಂಗಳೂರು ಜನ ಫುಲ್ ಖುಷಿಯಾದರು. ಆದರೆ ಮೂರೇ ದಿನ ಈಗ ಫಟ್ ಅಂತಾ ಬ್ಯಾರಿಕೇಡ್ ಹಾಕಿ ಒಂದು ಬದಿಯ ರಸ್ತೆಯನ್ನು ಕ್ಲೋಸ್ ಮಾಡಿದ್ದಾರೆ.
Advertisement
ಹೌದು. ಜಸ್ಟ್ ಮೂರೇ ದಿನ ಜನ ವಾಹನದಲ್ಲಿ ಜುಮ್ ಅಂತಾ ಶಿವಾನಂದ ಸರ್ಕಲ್‍ನ ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಡಿದ್ದೆ ಬಂತು. ಈಗ ಮತ್ತೆ ಪ್ಲೈವರ್ ಜನರಿಗೆ ನಾಟ್ ರೀಚೆಬಲ್. ಮತ್ತೆ ಕ್ಲೋಸ್ ಆಗಿದೆ. ಟ್ರಾಫಿಕ್ ಸಮಸ್ಯೆಗೆ 5 ವರ್ಷದ ಬಳಿಕ ಸಿಕ್ತಪ್ಪಾ ಮುಕ್ತಿ ಅಂತಾ ಖುಷಿಯಾಗಿದ್ದ ಜನ ಈಗ ಹ್ಯಾಪ್ ಮೋರೆ ಹಾಕುವಂತಾಗಿದೆ. ಹೊಸ ಸ್ಟೀಲ್ ಬ್ರಿಡ್ಜ್ ನಲ್ಲಿ ಸಿಕ್ಕಾಪಟ್ಟೆ ವೈಬ್ರೇಷನ್ ಆಗ್ತಿರೋದ್ರಿಂದ ಮತ್ತೆ ಬಂದ್ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಪೇಟೆಯಲ್ಲಿ ಆರ್.ವಿ ದೇವರಾಜ್ ಕುಟುಂಬ ಮಾತ್ರ ಸ್ಪರ್ಧಿಸಬೇಕಾ..?- ಕೆಜಿಎಫ್ ಬಾಬು
Advertisement
Advertisement
ಬಿಬಿಎಂಪಿ ವಿರುದ್ಧ ಜನ ಗರಂ ಆಗಿದ್ದು, ಹಿಡಿಶಾಪ ಹಾಕಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಮಾತನಾಡಿ, ಮೊನ್ನೆ ಪ್ರಾಯೋಗಿಕವಾಗಿ ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಕೊಂಚ ವೈಬ್ರೇಷನ್ ಇದೆ. ಇದು ಮಾಮುಲಿ. ಹೀಗಾಗಿ 40 ಟನ್ ವಾಹನ ಬಿಟ್ಟು ಟೆಸ್ಟ್ ಮಾಡಿ ಕ್ಯೂರಿಂಗ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮುಂದಿನ ತಿಂಗಳು ‘ಬಿಯಾಂಡ್ ಬೆಂಗಳೂರು’ ಸಮಾವೇಶ: ಜೋಶಿ, ರಾಜೀವ್ ಚಂದ್ರಶೇಖರ್‌ಗೆ ಆಹ್ವಾನ19 ಕೋಟಿ ಇದ್ದ ಪ್ರಾಜೆಕ್ಟ್ 5 ವರ್ಷಕ್ಕೆ 40 ಕೋಟಿಗೆ ಹೆಚ್ಚಾಯ್ತು. ಆದರೆ ಫ್ಲೈಓವರ್ ಗುಣಮಟ್ಟ ಮಾತ್ರ ಬದಲಾಗಿಲ್ಲ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]