ಶಿವಕಾರ್ತಿಕೇಯನ್ ಜೊತೆ ಅದೃಷ್ಟ ಪರೀಕ್ಷೆಗಿಳಿದ ಕನ್ನಡತಿ ರುಕ್ಮಿಣಿ ವಸಂತ್‌

Public TV
1 Min Read
rukmini vasanth sivakarthikeyan

‘ಅಮರನ್’ (Amaran) ಸಿನಿಮಾ ಬಳಿಕ ಶಿವಕಾರ್ತಿಕೇಯನ್ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಪ್ರಾಜೆಕ್ಟ್ ಮದರಾಸಿ. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಗ್ಲಿಂಪ್ಸ್‌ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಎ.ಆರ್. ಮುರುಗದಾಸ್ ಆ್ಯಕ್ಷನ್ ಕಟ್‌ ಹೇಳಿದ್ದು, ‘ಸಪ್ತ ಸಾಗರದಾಚೆ ಎಲ್ಲೋ’ ನಾಯಕಿ ರುಕ್ಮಿಣಿ ವಸಂತ್ ಅವರು (Rukmini Vasanth) ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಸಾಥ್‌ ಕೊಟ್ಟಿದ್ದಾರೆ. ಸದ್ಯ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರತಂಡ ‘ಮದರಾಸಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಇದನ್ನೂ ಓದಿ:1.3 ಕೋಟಿ ಮೌಲ್ಯದ ಲಕ್ಷುರಿ ಕಾರು ಖರೀದಿಸಿದ ರಿಷಬ್ ಶೆಟ್ಟಿ

rukmini vasanthಈ ವರ್ಷ ಸೆಪ್ಟೆಂಬರ್ 5ರಂದು ‘ಮದರಾಸಿ’ ಸಿನಿಮಾ ರಿಲೀಸ್‌ ಆಗಲಿದೆ. ಸ್ಪೆಷಲ್ ಪೋಸ್ಟರ್‌ ಮೂಲಕ‌ ಚಿತ್ರತಂಡ ಬಿಡುಗಡೆ ದಿನಾಂಕ ರಿವೀಲ್‌ ಮಾಡಿದೆ. ಪೋಸ್ಟರ್‌ನಲ್ಲಿ ಶಿವಕಾರ್ತಿಕೇಯನ್‌ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ವಿದ್ಯುತ್ ಜಮ್ವಾಲ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

rukmini vasanth

ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಹಲವರು ತಾರಾಬಳಗದಲ್ಲಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ. ಎನ್. ಶ್ರೀಲಕ್ಷ್ಮಿ ಪ್ರಸಾದ್ ಶ್ರೀ ಲಕ್ಷ್ಮಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ‘ಮದರಾಸಿ’ ಸಿನಿಮಾ ಮೂಡಿ ಬರುತ್ತಿದೆ.

Share This Article