ತುಮಕೂರು: ಕಾರ್ಯಕ್ರಮವೊಂದರಲ್ಲಿ ಗೋಳಾಡಿದ್ದ ಮಹಿಳೆಗೆ ಒಂದೇ ದಿನದಲ್ಲಿ ನಿವೇಶನ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ನಿವೇಶನ ಮಂಜೂರು ಮಾಡಲಾಗಿದೆ.
ಸೋಮವಾರ ತುಮಕೂರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮುಂದೆ ಮಹಿಳೆ ರಾಬಿಯಾ ಗೋಳಾಡಿದ್ದರು. ನಿವೇಶನಕ್ಕಾಗಿ ಎರಡು ಚಿಕ್ಕ ಹೆಣ್ಣುಮಕ್ಕಳೊಂದಿಗೆ ಸಿಎಂ ಮುಂದೆ ಕಣ್ಣೀರಿಟ್ಟಿದ್ದರು.
ಪರಿಸ್ಥಿತಿ ಕಂಡು ಜಿಲ್ಲಾಧಿಕಾರಿಗೆ ಕೂಡಲೇ ನಿವೇಶನ ನೀಡುವಂತೆ ಸಿಎಂ ಸೂಚಿಸಿದ್ದರು. ನಿನ್ನೆ ರಾಬಿಯ ಹೆಸರಿಗೆ 20-30 ಅಳತೆಯ ನಿವೇಶನ ಮಂಜೂರಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಠರಾವು ಮಾಡಿ ಆದೇಶ ಹೊರಡಿಸಲಾಗಿದೆ.
- Advertisement
ನಿವೇಶನ ಇಲ್ಲದೇ ಸರ್ಕಾರಿ ಕಚೇರಿಗಳಲ್ಲಿ ರಾಬಿಯಾ ಅಲೆದಾಡುತ್ತಿದ್ದರು. ಕೊನೆಗೆ ಶಿರಾ ನಗರಸಭಾ ಕಾರ್ಯಾಲಯದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಶಿರಾ ನಗರದ ಸರ್ವೆ ನಂಬರ್ 100 ರಲ್ಲಿ ನಿವೇಶನ ಹಂಚಿಕೆಯಾಗಿದೆ.