ಹಾಲುಂಡ ತವರು ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಸಿತಾರಾ (Sitara), ಹಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ದೇಶದಲ್ಲಿ ಇದ್ದರಾ ಅಥವಾ ವಿದೇಶದಲ್ಲಿ ನೆಲೆಯೂರಿದ್ದರಾ ಎನ್ನುವ ಕುರಿತೂ ಮಾಹಿತಿ ಇರಲಿಲ್ಲ. ಇದೀಗ ಏಕಾಏಕಿ ಶಬರಿಮಲೆಯಲ್ಲಿ (Sabarimala) ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಚಿರಂಜೀವಿ ಸರ್ಜಾ ನಟನೆಯ ‘ಅಮ್ಮ ಐ ಲವ್ ಯೂ’ ಚಿತ್ರದ ನಂತರ ಬಹುತೇಕ ಚಿತ್ರರಂಗದಿಂದಲೇ ದೂರವಿದ್ದ ಸಿತಾರಾಗೆ ಶಬರಿಮಲೆಗೆ ಹೋಗಬೇಕು ಎನ್ನುವ ಸಂಕಲ್ಪವಿತ್ತು ಎಂದು ಹೇಳಲಾಗುತ್ತಿದೆ. ಅದನ್ನು ಈಗ ಪೂರೈಸಿದ್ದಾರೆ. ಹಲವು ಮಹಿಳೆಯರ ಜೊತೆ ಶಬರಿಮಲೆಗೆ ಬಂದಿದ್ದ ಸಿತಾರಾ ಅಯ್ಯಪ್ಪನ ದರ್ಶನ (Darshana) ಪಡೆದಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ
ಕಾರ್ತಿಕ ಮಾಸದ ಆರಂಭದ ದಿನಗಳಲ್ಲಿ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಹಾಗಾಗಿ ಇದೇ ಸಂದರ್ಭದಲ್ಲಿ ಸಿತಾರಾ ಅಯ್ಯಪ್ಪನ (Ayyappa) ದರ್ಶನಕ್ಕೆ ಆಗಮಿಸಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರೊಂದಿಗೆ ಶಬರಿಮಲೆಗೆ ಬಂದಿದ್ದ ಅವರು, ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಣ್ಣೀರಿನ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದರು ಸಿತಾರಾ. ಅದರಲ್ಲೂ ಹಾಲುಂಡ ತವರು ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕನ್ನಡದಲ್ಲೇ ಅವರು ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಅವರದ್ದು.
Web Stories