ರಾಂಚಿ: JMM ಶಾಸಕಿ ಹಾಗೂ ಜಾರ್ಖಂಡ್‌ನ (Jharkhand) ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ಅವರ ಸೊಸೆ ಸೀತಾ ಸೊರೇನ್ (Sita Soren) ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸೀತಾ ಸೊರೇನ್ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಜಾರ್ಖಂಡ್ ಚುನಾವಣಾ ಉಸ್ತುವಾರಿ ಲಕ್ಷ್ಮೀಕಾಂತ್ ಬಾಜಪೇಯ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಸೇರುವ ಕೆಲವೇ ಗಂಟೆಗಳ ಮೊದಲು ಸೀತಾ ಸೊರೇನ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಗೆ ರಾಜೀನಾಮೆ ನೀಡಿದರು. ಇದನ್ನೂ ಓದಿ: ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥನಿಗೆ ಸುಪ್ರೀಂ ಸಮನ್ಸ್
Advertisement
Advertisement
ರಾಜೀನಾಮೆ ನೀಡಿದ್ದು ಏಕೆ?: ತಮ್ಮ ಪತಿ ದುರ್ಗಾ ಸೊರೇನ್ ಅವರ ಸಾವಿನ ನಂತರ, ಜೆಎಂಎಂ ತನಗೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ಬೆಂಬಲವನ್ನು ನೀಡಲು ವಿಫಲವಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಆಡಳಿತ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಮತ್ತು ಪ್ರತ್ಯೇಕಿಸಲಾಗಿದೆ ಎಂದು ಈ ವೇಳೆ ಆರೋಪಿಸಿದ ಅವರು, ಇಷ್ಟವಿಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ . ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿರುವ ಬಗ್ಗೆ ನನಗೆ ಅರಿವಾಗಿದೆ. ನನ್ನ ರಾಜೀನಾಮೆಯನ್ನು ನೀಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಆರೋಪಿಸಿದ್ದಾರೆ.