ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಇಂದು 560 ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.
ಶಂಕಿತ ಆರೋಪಿ ನವೀನ್ ಅಲಿಯಾಸ್ ಹೊಟ್ಟೆ ಮಂಜನ ಹೇಳಿಕೆಗಳು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿವೆ. ಗೌರಿ ಲಂಕೇಶ್ ಹತ್ಯೆಗೆ ಶಂಕಿತ ಆರೋಪಿ ಸಹಾಯ ಮಾಡಿದ್ದಾನಾ? ಇಡೀ ಘಟನಾವಳಿಗಳು ಗೊತ್ತಿದ್ರೂ ಮಂಪರು ಪರೀಕ್ಷೆಗೆ ಒಪ್ಪದಿರೋದು ಯಾಕೆ? ಈ ಎಲ್ಲ ಮಾಹಿತಿಗಳನ್ನು ದೋಪಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಗೌರಿ ಹತ್ಯೆಯ ಬಳಿಕ ಸಾಹಿತಿ ಭಗವಾನ್ ಅವರನ್ನು ಕೊಲ್ಲಲು ಶ್ರೀರಂಗಪಟ್ಟಣದಲ್ಲಿ ತರಬೇತಿ ಪಡೆದಿದ್ದರು. ಹತ್ಯೆಗೆ ಹಂತಕರು ಮಹಾರಾಷ್ಟ್ರದ ಹಳ್ಳಿಯೊಂದರಿಂದ ಬಂದಿದ್ದು, ಉಳಿದ ಆರೋಪಿಗಳು ಎಸ್ಕೇಪ್ ಮಾಹಿತಿಯುಳ್ಳ ದೋಷಾರೋಪಪಟ್ಟಿ ಇಂದು ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.