– ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಕ್ಕೆ ಟಾರ್ಗೆಟ್
– ಅಧಿಕಾರಿಗಳು ಮಾಡಿದ ತಪ್ಪಿಗೆ ನನ್ನ ವಿರುದ್ಧ ಕ್ರಮ
ಬೆಂಗಳೂರು: ಸರ್ಕಾರದ ಭ್ರಷ್ಟಾಚಾರ (Corruption) ಬಗ್ಗೆ ವಿರುದ್ಧ ಮಾತನಾಡುತ್ತಿರುವುದಕ್ಕೆ ಸಿದ್ದರಾಮಯ್ಯ (Siddaramaiah) ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಒಂದು ದಿನವಾದರೂ ಜೈಲಿಗೆ ಹಾಕಿಸಬೇಕು ಅಂತ ನನ್ನ ಸಹಿ ತಿರುಚಿರುವ ದಾಖಲಾತಿಗಳನ್ನ ಇಟ್ಟುಕೊಂಡು ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಸಾಯಿ ವೆಂಕಟೇಶ್ವರ ಮೈನಿಂಗ್ ಪ್ರಕರಣದಲ್ಲಿ ತನ್ನ ವಿರುದ್ಧ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಕ್ಕೆ ಹೆಚ್‌ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.
Advertisement
ಸಿದ್ದರಾಮಯ್ಯ ಸರ್ಕಾರ ನನ್ನ ವಿರುದ್ದ ಷಡ್ಯಂತ್ರ ಮಾಡುತ್ತಿದೆ. ನನ್ನನ್ನ ಒಂದು ದಿನವಾದರೂ ಜೈಲಿಗೆ ಹಾಕಲು ಪ್ಲ್ಯಾನ್ ನಡೆಯುತ್ತಿದೆ. ಸಾಯಿ ವೆಂಕಟೇಶ್ವರ ಮೈನಿಂಗ್ ಕೇಸ್ ನಲ್ಲಿ ನನ್ನ ಸಹಿಯನ್ನೇ ನಕಲು ಮಾಡಿದ್ದಾರೆ. ನಾನು ಸಹಿ ಮಾಡಿದೇ ಹೋದರೂ ನನ್ನ ಸಹಿ ಅಂತ ಕೇಸ್ ನಡೆಯುತ್ತಿದೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ನನ್ನ ಮೇಲೆ ಕ್ರಮಕ್ಕೆ ಮುಂದಾಗಿದ್ದು, ಇದು ರಾಜ್ಯ ಸರ್ಕಾರದ ಸೇಡಿನ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಸಾಯಿ ವೆಂಕಟೇಶ್ವರ ಮಿನರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) 2017 ರಲ್ಲಿ 3 ತಿಂಗಳ ಒಳಗೆ ಎಸ್‌ಐಟಿ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಈ ಸರ್ಕಾರ 2024 ಆದರೂ ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ ಮಾಡಿಲ್ಲ. ಅದನ್ನು ಬಿಟ್ಟು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ ಎಂದು ಎಸ್‌ಐಟಿ ಮೂಲಕ ಪತ್ರ ಬರೆಸಿ ಹೇಗಾದರೂ ಮಾಡಿ ನನ್ನನ್ನ ಸಿಲುಕಿಸಬೇಕು ಎಂದು ಪ್ಲ್ಯಾನ್ ಮಾಡಿದೆ ಎಂದು ಆರೋಪಿಸಿದರು
Advertisement
2017 ರಿಂದಲೂ ನನ್ನನ್ನ ಜೈಲಿಗೆ ಹಾಕಿಸಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರ ವಿರುದ್ದ ನಾನು ಮಾತಾಡಿದ್ದಕ್ಕೆ ನನ್ನ ವಿರುದ್ದ ಕುತಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂಡ್ಯದಲ್ಲಿ ಪತಿ-ಪತ್ನಿ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಹೆಂಡತಿ ಶವ ಪತ್ತೆ – ಕೆರೆಗೆ ಹಾರಿ ಗಂಡ ಆತ್ಮಹತ್ಯೆ
ಸಿದ್ದರಾಮಯ್ಯ ಮೇಲೆ ಲೋಕಾಯುಕ್ತದಲ್ಲಿ 61 ಕೇಸ್ ಇವೆ. ಇದೂವರೆಗೂ 50 ಕೇಸ್ ತನಿಖೆಯೇ ಆಗಿಲ್ಲ. ತಮ್ಮ ಮೇಲಿನ ಕೇಸ್ ಮುಚ್ಚಿ ಹಾಕಲು ಎಸಿಬಿ ರಚನೆ ಮಾಡಿದರು. ಆದರೂ ನನ್ನ ಜೀವನ ತೆರದ ಪುಸ್ತಕ ಅಂತ ಭಜನೆ ಮಾಡುತ್ತಾರೆ. ನನ್ನ ವಿರುದ್ದ ನಿತ್ಯ ಸಭೆಗಳನ್ನು ಮಾಡುತ್ತಿದ್ದಾರೆ. ಸಿಎಂ ಕಾನೂನು ಸಲಹೆಗಾರರು ಅವರಿಗೆ ಸಲಹೆ ಕೊಡ್ತಿದ್ದಾರೆ. ಇಷ್ಟೆಲ್ಲ ನನ್ನ ಮೇಲೆ ಆರೋಪ ಮಾಡುವ ಸಿದ್ದರಾಮಯ್ಯ ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅದಿರು ಕದ್ದವರಿಗೆ ಮತ್ತೆ ಮೈನಿಂಗ್ ಮಾಡಲು ಅಕ್ರಮವಾಗಿ ಅವಕಾಶ ಕೊಟ್ಟಿದೆ. ಸಮಯ ಬಂದಾಗ ದಾಖಲಾತಿ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಮುಗಿಸಲು ಏನಾದರೂ ಹುಡುಕಿ ಎಂದು ಸಿಎಂ ಅಂಡ್ ಟೀಂ ಸದಸ್ಯರು ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ವಿರುದ್ಧ ದಾಖಲಾತಿ ತೆಗೆಯಬೇಕು ಅಂತ ನಿತ್ಯ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲೆ ಯಾಕೆ ದ್ವೇಷ? ನನ್ನ ಮೇಲೆ ಇವರಿಗೆ ಇರುವ ಆತಂಕಕ್ಕೆ ಹೀಗೆ ಮಾಡುತ್ತಿದ್ದಾರೆ. ಸಾಯಿ ವೆಂಕಟೇಶ್ವರ ಮೈನಿಂಗ್ ಕೇಸ್ ಸಂಬಂಧ ನಾನು ಲೀಗಲ್ ಫೈಟ್ ಮಾಡುತ್ತೇನೆ. ಇಂತಹ ಪರಿಸ್ಥಿತಿಗಳಲ್ಲಿ ಕಾನೂನು ಮೊರೆ ಹೋಗಲೇಬೇಕು ಎಂದರು.