ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಗನ್ ಪತ್ತೆಗೆ ವಿಶೇಷ ತಂತ್ರಜ್ಞಾನ ಬಳಸಲಾಗ್ತಿದೆ.
ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ಮುಂಬೈ ಮತ್ತು ಥಾಣೆಯ ನಡುವಿನ ನದಿಯಲ್ಲಿ ಬಿಸಾಕಿದ್ದರು. ಆ ಗನ್ ಪತ್ತೆ ಹಚ್ಚುವ ಸಲುವಾಗಿ ಎಸ್‍ಐಟಿ ಪ್ರೋಬ್ ತಂತ್ರಜ್ಞಾನವನ್ನ ಬಳಸಲಿದೆ. ಎಷ್ಟೇ ಆಳದಲ್ಲಿ ಲೋಹದ ವಸ್ತುಗಳಿದ್ದರೂ ಪತ್ತೆ ಹಚ್ಚುವುದು ಪ್ರೋಬ್ ತಂತ್ರಜ್ಞಾನದ ವಿಶೇಷವಾಗಿದೆ.
Advertisement
ಈ ತಂತ್ರಜ್ಞಾನದಿಂದ ಪತ್ತೆಯಾಗುವ ಲೋಹದ ವಸ್ತುಗಳ ಫೋಟೋವನ್ನ ಲ್ಯಾಪ್‍ಟ್ಯಾಪ್‍ಗೆ ಅïಲೋಡ್ ಮಾಡುತ್ತೆ. ಈ ಕಾರ್ಯಾಚರಣೆಗಾಗಿ ಎಸ್‍ಐಟಿ ಮಹಾರಾಷ್ಟ್ರ ಸರ್ಕಾರದ ನೆರವು ಪಡೆಯಲಾಗುತ್ತದೆ.
Advertisement
Advertisement
ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಎಸ್‍ಐಟಿ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಆದ್ರೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಗನ್ ಪತ್ತೆ ಮಾಡಬೇಕಾಗಿದೆ. ಆ ಗನ್ ಅನ್ನು ಅಮೋಳ್ ಕಾಳೆಯನ್ನು ಬಂಧಿಸಿದ ಸಂದರ್ಭದಲ್ಲಿ ನಾವು ಕೂಡ ಸಿಕ್ಕಿಬೀಳಬಹುದೆಂಬ ಭಯದಿಂದ ಮುಂಬೈ ಮತ್ತು ಥಾಣೆ ನಡುವಿನ ನಿರ್ಜನ ಪ್ರದೇಶದಲ್ಲಿ ಹರಿಯುತ್ತಿರುವ ನದಿಗೆ ಬಿಸಾಕಿದ್ದೇವೆ ಎಂದು ಆರೋಪಿಗಳು ಹೇಳಿದ್ದರು. ಹೀಗಾಗಿ ಎಸ್‍ಐಟಿ ಪೊಲೀಸರು ಅಲ್ಲಿಗೂ ಕೂಡ 3 ಬಾರಿ ತೆರಳಿ ಸ್ಥಳ ಮಹಜರು ಮಾಡಿಬಂದಿದ್ದರು. ಇದೀಗ ಪ್ರೋಬ್ ತಂತ್ರಜ್ಞಾನದ ಮೂಲಕ ಪತ್ತೆ ಮಾಡಲು ಎಸ್‍ಐಟಿ ಪೊಲೀಸರು ಮುಂದಾಗಿದ್ದಾರೆ.
Advertisement
2017 ರ ನವೆಂಬರ್ 5 ರಂದು ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ತಮ್ಮ ರಾಜರಾಜೇಶ್ವರಿ ನಗರದ ನಿವಾಸದ ಮುಂದೆಯೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು.
https://www.youtube.com/watch?v=WTfId_2PhGQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv