ಬೆಂಗಳೂರು: ಬಿಜೆಪಿಗರ ಪ್ರತಿಭಟನೆ, ನಿರಂತರ ಆಕ್ರೋಶದ ಪರಿಣಾಮ ವಾಲ್ಮೀಕಿ ನಿಗಮ ಹಗರಣದ (Valmiki Development Corporation) ತನಿಖೆ ಚುರುಕು ಪಡೆದಿದೆ. ಮಾಜಿ ಸಚಿವ ನಾಗೇಂದ್ರ (Nagendra) ಎಸ್‌ಐಟಿ (SIT) ಇದೀಗ ನೊಟೀಸ್ ಜಾರಿ ಮಾಡಿದೆ.
ತನಿಖೆಯಲ್ಲಿ ಕಂಡುಬಂದ ಕೆಲ ಮಾಹಿತಿ ಆಧರಿಸಿ ನಾಗೇಂದ್ರಗೆ ಎಸ್‌ಐಟಿ ನೋಟಿಸ್ ನೀಡಿದೆ ಎನ್ನಲಾಗಿದೆ. ಇದೇ ವೇಳೆ, ನಿಗಮದ ಅಧ್ಯಕ್ಷ, ಶಾಸನ ಬಸನಗೌಡ ದದ್ದಲ್‌ಗೂ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಾಸಿವೆ ಕಾಳಿನಷ್ಟೂ ನನ್ನ ಪಾತ್ರ ಇಲ್ಲ: ದದ್ದಲ್
ಸಚಿವ ನಾಗೇಂದ್ರ ಪಿಎಸ್ ಆಗಿದ್ದ ದೇವೇಂದ್ರಪ್ಪ ಹಾಗೂ ದದ್ದಲ್ ಪಿಎಸ್ ಆಗಿರುವ ಪಂಪಣ್ಣಗೂ ಎಸ್‌ಐಟಿ ಸಮನ್ಸ್ ಹೋಗಿವೆ. ನಾಗೇಂದ್ರ ಪಿಎಸ್ ಆಗಿದ್ದ ದೇವೇಂದ್ರಪ್ಪಗೆ ಹೈದರಾಬಾದ್ ಮೂಲದ ಆರೋಪಿ ಸತ್ಯನಾರಾಯಣ 4.40 ಕೋಟಿ ಹಣ ನೀಡಿದ್ದ.
ಈ ಪೈಕಿ 4 ಕೋಟಿ ಹಣವನ್ನು ರಿಕವರಿ ಮಾಡಿರುವ ಎಸ್‌ಐಟಿ, ಉಳಿದ 40 ಲಕ್ಷ ಹಣದ ವಿಚಾರಕ್ಕಾಗಿ ಈಗ ನೋಟಿಸ್ ನೀಡಿದೆ. ಈ ಹಗರಣ ಸಂಬಂಧ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ, ಮುಡಾ ಅಕ್ರಮ ಪ್ರಕರಣ: ಸಿಎಂ ಮನೆ ಮುತ್ತಿಗೆಗೆ ಹೊರಟಿದ್ದ ಬಿಜೆಪಿ ನಾಯಕರು ವಶಕ್ಕೆ