– ಎಸ್‌ಐಟಿ ಮುಂದೆ ಕಣ್ಣೀರಿಟ್ಟ ಯುಟ್ಯೂಬರ್
ಮಂಗಳೂರು: ಬುರುಡೆ ಪ್ರಕರಣದ ರಹಸ್ಯ (Dharmasthala Mass Burials Case) ಹಾಗೂ ಅನನ್ಯಾ ಭಟ್ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಯೂಟ್ಯೂಬರ್ ಅಭಿಷೇಕ್‌ನನ್ನು (Abhishek M) ತೀವ್ರ ವಿಚಾರಣೆ ನಡೆಸಿದ್ದಾರೆ.
ನಿನ್ನೆ ತಡರಾತ್ರಿವರೆಗೂ ಅಭಿಷೇಕ್ ಗ್ರಿಲ್ ಮಾಡಿರೋ ಎಸ್‌ಐಟಿ (SIT) ಅಧಿಕಾರಿಗಳು ಬುರುಡೆ ಪ್ರಕರಣದ ಕುರಿತು ಯೂಟ್ಯೂಬರ್ ಅಭಿಷೇಕ್ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ತನ್ನ ಯೂಟ್ಯೂಬ್ ವಿಡಿಯೋಗಳಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಅಭಿಷೇಕ್ ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದವರಿಗೆ SIT ಬುಲಾವ್
ಪ್ರಕರಣ ದಾಖಲಾಗುವ ಮೊದಲೇ ವಿಡಿಯೋಗಳನ್ನು ಮಾಡಿದ್ದ ಅಭಿಷೇಕ್, 6 ತಿಂಗಳ ಹಿಂದೆ ಗಿರೀಶ್ ಮಟ್ಟಣ್ಣವರ್ ಸಂಪರ್ಕ ಮಾಡಿದ್ದ. ಈ ಬಗ್ಗೆ ವಿಚಾರಣೆ ವೆಳೆ ಅಭಿಷೇಕ್ ಬಾಯ್ಬಿಟ್ಟಿದ್ದು ಲೈಕ್ಸ್ ಹಾಗೂ ವ್ಯೂವ್ಸ್‌ಗಾಗಿ ವಿಡಿಯೋ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಎಸ್‌ಐಟಿ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾನೆ. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್
ಜೊತೆಗೆ ರಾತ್ರಿ ಹೊತ್ತು ಬಂಗ್ಲೆಗುಡ್ಡೆಕ್ಕೆ ಭೇಟಿ ನೀಡಿ ಅಭಿಷೇಕ್ ಹಾಗೂ ಜಯಂತ್ ಟಿ. ವಿಡಿಯೋ ಮಾಡಿದ್ದಾರಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಯೂಟ್ಯೂಬರ್‌ಗಳಿಗೆ ಎಸ್‌ಐಟಿ ನೋಟಿಸ್ ನೀಡಲು ತಯಾರಿ ನಡೆದಿಸಿದ್ದು, ಬುರುಡೆ ಗ್ಯಾಂಗ್ ಮುಖವಾಡ ಕಳಚಲಿದೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್ – ತನಿಖೆಗೆ ಇಡಿ ಎಂಟ್ರಿ