ಶ್ರೀ ಸಾಯಿ ಮಿನರಲ್ಸ್ ಗಣಿಗಾರಿಕೆ ಅಕ್ರಮ ಕೇಸ್‌ – ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ SIT

Public TV
1 Min Read
HD Kumaraswamy 4

ಬೆಂಗಳೂರು: ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿಗಾರಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ವಿಶೇಷ ತನಿಖಾ ತಂಡ (SIT) ರಾಜ್ಯಪಾಲರ ಅನುಮತಿ ಕೇಳಿದೆ.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕೇಸ್‌ನಲ್ಲಿ ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಈ ಹಿಂದೆಯೇ ರಾಜ್ಯಪಾಲರ ಬಳಿ ಅನುಮತಿ ಕೇಳಲಾಗಿತ್ತು. ದೋಷಾರೋಪ ಪಟ್ಟಿಯನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಲು ರಾಜ್ಯಪಾಲರು ಸೂಚಿಸಿದ್ರು. ಅದರಂತೆ ದೋಷಾರೋಪ ಪಟ್ಟಿಯನ್ನು ಸಂಪೂರ್ಣವಾಗಿ ತರ್ಜುಮೆ ಮಾಡಲಾಗಿದೆ. ಇದನ್ನೂ ಓದಿ: ಹೇಮಾವತಿ ಎಡದಂಡೆ ನಾಲೆಗಳಿಗಿಲ್ಲ ನೀರು – ಕೆ.ಆರ್ ಪೇಟೆ, ನಾಗಮಂಗಲ ರೈತರು ಕಂಗಾಲು

ಸುಮಾರು 4,500 ಪುಟಗಳ ದೋಷಾರೋಪ ಪಟ್ಟಿ ತರ್ಜುಮೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು ಅದನ್ನು ರಾಜಭವನಕ್ಕೆ ತಲುಪಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿದ್ದಾರೆ. ಇದನ್ನೂ ಓದಿ:  43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್‌ ಕಾರ್ಡ್‌ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್‌ ಆಫರ್‌

Share This Article