ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

Public TV
1 Min Read
Gali Janardhan Reddy 2

ಬೆಂಗಳೂರು: ಅಂಬಿಡೆಂಟ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಬಳ್ಳಾರಿ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧ ವಿಶೇಷ ತನಿಖಾ ತಂಡ (ಎಸ್‍ಐಟಿ) ಚಾರ್ಜ್ ಶೀಟ್ ಸಲ್ಲಿಸಿದೆ.

ಶೇಖ್ ಸಾಬ್ ಗಣಿಯಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಮತ್ತು ಆಪ್ತರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ್ಕಕೆ ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ಚಾರ್ಜ್ ಶೀಟ್ ನಲ್ಲಿ ಜನಾರ್ದನ ರೆಡ್ಡಿ ಎ 1 ಆರೋಪಿಯಾಗಿದ್ದು, ಎ 2 ಆಗಿ ಅಲಿಖಾನ್ ಹಾಗೂ ಎ 3 ಆರೋಪಿಯಾಗಿ ಶ್ರೀನಿವಾಸ ರೆಡ್ಡಿ ಅವರ ಹೆಸರು ಉಲ್ಲೇಖ ಮಾಡಲಾಗಿದೆ. ಉಳಿದಂತೆ ಮತ್ತೊಬ್ಬ ಆರೋಪಿ ಖಾರದ ಪುಡಿ ಮಹೇಶ್ ಸೇರಿ ಹಲವರನ್ನು ಚಾರ್ಜ್ ಶೀಟ್ ನಿಂದ ಕೈ ಬಿಡಲಾಗಿದೆ.

Janardhan Reddy 2

ಜನಾರ್ದನ ರೆಡ್ಡಿ ವಿರುದ್ಧ IPಅ 379, 420, 120ಬಿ, ಎಂಎಂಡಿಆರ್ ಕಾಯ್ದೆಯ 125ನಿಯಮ, ಕರ್ನಾಟಕ ಅರಣ್ಯ ಖಾಯ್ದೆ ನಿಯಮ 144ರ ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸುಮಾರು 1,069 ಮೆಟ್ರಿಕ್ ಟನ್ ಅದಿರು ಅಕ್ರಮ ಗಣಿಗಾರಿಗೆ ನಡೆಸಿದ್ದಾರೆ ಹಾಗು ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯ ಸರ್ಕಾರಕ್ಕೆ 23,89,650 ರೂ. ನಷ್ಟ ಮಾಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಅಂದಹಾಗೇ ಶೇಖ್ ಸಾಬ್ ಎಂಬವರಿಂದ ರೆಡ್ಡಿ & ಟೀಂ ಗಣಿ ಕಂಪನಿಯ ಗುತ್ತಿಗೆ ಪಡೆದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *