– ಕಮಲ ಪಾಳಯ ತಿರುಗೇಟು
ಬೆಂಗಳೂರು: ಶಿವಾಜಿನಗರ ಶಾಸಕ ರೋಷನ್ ಬೇಗ್ ವಶಕ್ಕೆ ಪಡೆದ ಬೆನ್ನಲ್ಲೇ ರಾಜಕೀಯ ಸಮರ ಜೋರಾಗಿದೆ. ಟ್ವಿಟ್ಟರ್‍ನಲ್ಲಿ ಬಿಜೆಪಿಗೆ ಸಿಎಂ ಟ್ವೀಟೇಟು ನೀಡಿದರೆ, ಬಿಜೆಪಿ ತಿರುಗೇಟು ನೀಡಿದೆ.
https://twitter.com/hd_kumaraswamy/status/1150832409912344577
Advertisement
ಸಿಎಂ ಟ್ವೀಟ್ ನಲ್ಲೇನಿತ್ತು?
ನಿನ್ನೆ ರೋಷನ್ ಬೇಗ್ ಮುಂಬೈಗೆ ಹೊರಟಾಗ ಎಸ್‍ಐಟಿ ತಂಡ ವಶಕ್ಕೆ ಪಡೆದಿದೆ. ಈ ವೇಳೆ ಜೊತೆಗಿದ್ದ ಬಿಎಸ್‍ವೈ ಪಿಎ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಪಿ ಯೋಗೇಶ್ವರ್ ಕೂಡ ಜೊತೆಗೇ ಇದ್ದರು. ಇದು ಬಿಜೆಪಿಯ ಕುದುರೆ ವ್ಯಾಪಾರವನ್ನು ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ.
Advertisement
It is false that @BSYBJP’s PA Santhosh was travelling along with Mr. Baig.
CM is peddling fake news & misleading the state. It was only Mr. Baig who was travelling & their was no 2nd passenger.
We demand to check boarding passes & CCTV footage to put out the facts.
— BJP Karnataka (@BJP4Karnataka) July 15, 2019
Advertisement
ಬಿಜೆಪಿ ತಿರುಗೇಟು:
ಇದಕ್ಕೆ ಬಿಜೆಪಿ ರೀ ಟ್ವೀಟ್ ಮಾಡಿದ್ದು, ಈ ಬಗ್ಗೆ ಸಿಸಿಟಿವಿ, ಬೋರ್ಡಿಂಗ್ ಪಾಸ್ ಚೆಕ್ ಮಾಡಿದರೆ ಸತ್ಯ ಹೊರಬರುತ್ತದೆ. ಸಿಎಂ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಕಿಡಿಕಾರಿದೆ.
Advertisement
ಸಿಎಂ ಹಾಗೂ ಅವರ ಟೀಂ ಸರ್ಕಾರ ಉಳಿಸಿಕೊಳ್ಳಲು ಅಡ್ಡ ದಾರಿ ಹಿಡಿದಿದೆ. ರೋಷನ್ ಬೇಗ್ ಜು.19 ರಂದು ಹಾಜರಾಗುತ್ತೇನೆ ಎಂದು ಮನವಿ ಮಾಡಿದ್ದರು. ರಾಜ್ಯ ಸರ್ಕಾರ ತನ್ನದೇ ಸ್ವಂತ ಶಾಸಕರಿಗೆ ಯಾವ ರೀತಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಇದರಿಂದ ಗೊತ್ತಾಗುತ್ತದೆ. ರಾಜ್ಯ ಸರ್ಕಾರ ತಮ್ಮ ತನಿಖಾ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಳ್ತಿದೆ ಎಂದು ತಿರುಗೇಟು ನೀಡಿದೆ.
CM @hd_kumaraswamy is using the state machinery to save his govt now. Mr. Roshan Baig was given time till 19th July to appear before SIT. This shows how the state Govt is blackmailing and treating their own MLAs’ using the institutions. pic.twitter.com/m3u09OFRkD
— BJP Karnataka (@BJP4Karnataka) July 15, 2019
ಬೇಗ್ ಎಸ್‍ಐಟಿ ವಶ:
ಐಎಂಎ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ಕ್ಷೇತ್ರದ ಶಾಸಕ ಮಾಜಿ ಸಚಿವ ಆರ್ ರೋಷನ್ ಬೇಗ್‍ರನ್ನ ಎಸ್‍ಐಟಿ ತಂಡ ಸಿನಿಮಾ ಸ್ಟೈಲಲ್ಲಿ ವಶಕ್ಕೆ ಪಡೆದಿದೆ. ಎಸ್‍ಐಟಿ ನೀಡಿದ್ದ ನೋಟಿಸ್ ಪ್ರಕಾರ ಸೋಮವಾರ ರೋಷನ್ ಬೇಗ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಮುಂಬೈಗೆ ಹಾರೋ ಪ್ಲಾನ್‍ನಲ್ಲಿದ್ದ ರೋಷನ್ ಬೇಗ್ 10 ಗಂಟೆ 35 ನಿಮಿಷಕ್ಕೆ ಸರಿಯಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
Today SIT probing the #IMA case detained @rroshanbaig for questioning at the BIAL airport while he was trying leave along with @BSYBJP's PA Santosh on a chartered flight to Mumbai. I was told that on seeing the SIT, Santhosh ran away while the team apprehended Mr. Baig. 1/2 pic.twitter.com/MmyH4CyVfP
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 15, 2019
ಇದೇ ವೇಳೆ ಸ್ಥಳಕ್ಕೆ ಎಂಟ್ರಿ ಕೊಟ್ಟ ಡಿಸಿಪಿ ಗಿರೀಶ್ ನೇತೃತ್ವದ ಎಸ್‍ಐಟಿ, 11 ಗಂಟೆ ಸುಮಾರಿಗೆ ರೋಷನ್ ಬೇಗ್‍ರನ್ನು ವಶಕ್ಕೆ ಪಡೆದಿದೆ. ಅಲ್ಲದೆ ಸುಮಾರು 2 ಗಂಟೆ ಕಾಲ ವಿಐಪಿ ಲಾಂಜ್‍ನಲ್ಲೇ ವಿಚಾರಣೆ ನಡೆಸಿ, ಕಾನೂನಾತ್ಮಕ ಪ್ರಕ್ರಿಯೆಗಳನ್ನ ಮುಗಿಸಿದ್ದಾರೆ. ನಂತರ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬೇಗ್‍ರನ್ನು ಬೆಂಗಳೂರಿಗೆ ಕರೆತಂದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ.