ಚಿಕ್ಕಬಳ್ಳಾಪುರ: ಹದಿಹರೆಯದ ವಯಸ್ಸಲ್ಲಿ ಪ್ರೀತಿ ಪ್ರೇಮ ಎಂದು ಅಕ್ಕ-ತಂಗಿ ಇಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಕೆರೆಯಲ್ಲಿ ನಡೆದಿದೆ.
ಅಗಲಗುರ್ಕಿ ಗ್ರಾಮದ ಮುನಿಸ್ವಾಮಪ್ಪ ಹಾಗೂ ಲಕ್ಷ್ಮೀ ದಂಪತಿ ಪುತ್ರಿಯರಾದ 16 ವರ್ಷದ ಅಶ್ವಿನಿ ಹಾಗೂ 14 ವರ್ಷದ ನಿಶ್ಚಿತಾ ಮೃತರು. ಕಂದವಾರ ಕೆರೆಯಲ್ಲಿ ಭಾನುವಾರ ಮಧ್ಯಾಹ್ನ ಬಾಲಕಿಯ ಮೃತದೇಹ ತೇಲಾಡುತ್ತಿದ್ದನ್ನ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಸಂಜೆ ವೇಳೆಗೆ ಮತ್ತೊಂದು ಮೃತದೇಹ ಅದೇ ಜಾಗದಲ್ಲಿ ತೇಲಿಬಂದಿದೆ. ಎರಡು ಮೃತದೇಹಗಳನ್ನ ಆಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್
ಬೈದು ಬುದ್ದಿ ಹೇಳಿದ್ದ ಪೋಷಕರು
ಆಟೋ ಚಾಲಕ ಮುನಿಸ್ವಾಮಿ ಹಾಗೂ ಲಕ್ಷ್ಮೀ ದಂಪತಿ ಹಿರಿಯ ಪುತ್ರಿ ಅಶ್ವಿನಿ ತಮ್ಮದೇ ಗ್ರಾಮದ ಎದುರು ಮನೆಯ 18 ವರ್ಷದ ರಕ್ಷಿತ್ ಜೊತೆ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದಳು. ಈ ವಿಷಯ ತಿಳಿದಿದ್ದ ಪೋಷಕರು ಕಳೆದ 6 ತಿಂಗಳ ಹಿಂದೆಯೇ ಬೈದು ಬುದ್ದಿವಾದ ಹೇಳಿದ್ದರು.
ನಮ್ಮನ್ನ ಹುಡುಕಬೇಡಿ
ಪ್ರೀತಿ ಮಾಡೋದು ಬಿಡದ ಅಶ್ವಿನಿ, ಕದ್ದುಮುಚ್ಚಿ ಯುವಕನ ಜೊತೆ ಪ್ರೀತಿ ಪ್ರೇಮ ಮುಂದುವರಿಸಿದ್ದಳು. ಆದ್ರೆ ಭಾನುವಾರ ಚಿಕ್ಕಬಳ್ಳಾಪುರ ನಗರಕ್ಕೆ ಬಂದಿದ್ದ ಅಕ್ಕ-ತಂಗಿ ಇಬ್ಬರು ಅಪರಿಚಿತರ ಮೊಬೈಲ್ ಪಡೆದು ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅಪ್ಪ ಮುನಿಸ್ವಾಮಿ ಅವರಿಗೆ ಕರೆ ಮಾಡಿ, ಅಪ್ಪ ನಮ್ಮನ್ನ ಹುಡುಕಬೇಡಿ ನಾವು ನಿಮಗೆ ಸಿಗಲ್ಲ ಎಂದು ಹೇಳಿದ್ದಾರೆ. ಕೂಡಲೇ ತಂದೆ ಕರೆ ಮಾಡಿದ ಜಾಗಕ್ಕೆ ಹೋಗಿ ಹುಡುಕುವಷ್ಟರಲ್ಲಿ ಅಲ್ಲಿ ಇಬ್ಬರು ಮಕ್ಕಳು ಇರಲಿಲ್ಲ.
ಅಕ್ಕನ ಜೊತೆ ತಂಗಿಯೂ ಆತ್ಮಹತ್ಯೆ
ರಾತ್ರಿಯೆಲ್ಲ ಹುಡುಕಾಡಿದ್ರೂ ಮಕ್ಕಳ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಮಧ್ಯಾಹ್ನ ಮೊದಲು ಕಂದವಾರ ಕೆರೆಯಲ್ಲಿ ಹಿರಿಯ ಮಗಳು ಮೃತದೇಹ ತೇಲಿಬಂದಿದ್ದು, ತದನಂತರ ಕಿರಿಯ ಮಗಳ ಮೃತದೇಹ ತೇಲಿಬಂದಿದೆ. ಓದೋ ವಯಸ್ಸಲ್ಲಿ ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದು, ಅಪ್ಪ ಅಮ್ಮ ಬುದ್ದಿವಾದ ಹೇಳಿ ದಂಡಿಸಿದ್ದಕ್ಕೆ ತಾನೂ ಸತ್ತು, ತನ್ನ ಜೊತೆಗೆ ತನ್ನ ತಂಗಿಯನ್ನ ಸಹ ಸಾವಿನ ಮನೆಗೆ ಕರೆದೊಯ್ದಿದ್ದಾಳೆ. ಇದನ್ನೂ ಓದಿ: ಸುಧಾಮೂರ್ತಿ ರಾಷ್ಟ್ರಪತಿ ಆಗಬೇಕೆಂದು ವಿಶೇಷ ಪೂಜೆ
ಯುವತಿ ಪ್ರೀತಿಸುತ್ತಿದ್ದ ಯುವಕ ರಕ್ಷಿತ್ ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.