ಬೆಂಗಳೂರು: ಅಫ್ಘಾನಿಸ್ತಾನದಲ್ಲಿರುವ ಸಿಲುಕಿರುವ ಮಂಗಳೂರು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ತಾ ತಾವು ಕಾಬೂಲ್ ನಗರದ ಕಾನ್ವೆಂಟಿಯಲ್ಲಿ ಸುರಕ್ಷಿತವಾಗಿರುವ ಬಗ್ಗೆ ಆಡಿಯೋ ಸಂದೇಶ ಕಳುಹಿಸಿದ್ದಾರೆ.
ಸಿಸ್ಟರ್ ಥೆರೆಸಾ ಕ್ರಾಸ್ಟಾ ಆಡಿಯೋ ಮೆಸೇಜ್
ನಾನು ಸಿಸ್ಟರ್ ಥೆರೇಸಾ… ಕಾಬೂಲ್ ಕಾನ್ವೆಂಟಿನಲ್ಲಿ ಸುರಕ್ಷಿತವಾಗಿದ್ದೇನೆ. ನಾನು ಕೆಲಸ ಮಾಡುವ ಸಂಸ್ಥೆಯು ಪಿಪಿಕೆ ಇಟಾಲಿಯನಾ ಅವರು ನನ್ನ ಸುರಕ್ಷತೆಗೆ ಇಟಾಲಿಯನ್ ಕೌನ್ಸಲೆಂಟ್ ರೋಮ್ ನಿಂದ ಇಟಲಿಗೆ ಹೋಗಲು ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಸದ್ಯಕ್ಕೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೊಂದಲ ಇರುವುದರಿಂದ ಒಳಗೆ ಪ್ರವೇಶವಿಲ್ಲ. ಆದ್ದರಿಂದ ನಮ್ಮ ಪ್ರಯಾಣವನ್ನು ಮುಂದೂಡಲಾಗಿದೆ. ಏರ್ಪೋರ್ಟ್ ಗೆ ಪ್ರವೇಶ ನೀಡುವಾಗ ನಮ್ಮನ್ನು ಕರೆದುಕೊಂಡು ಹೋಗುವರು. ಇಂಡಿಯನ್ ಎಂಬೆಸಿಗೆ ನಾನು ರಿಜಿಸ್ಟರ್ ಮಾಡಿರೋದ್ರಿಂದ ಸುರಕ್ಷತೆಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ. ನಿಮ್ಮ ಸಹಕಾರಕ್ಕೆ ನನ್ನ ತುಂಬು ಹೃದಯದ ವಂದನೆಗಳು ಎಂದು ಹೇಳಿದ್ದಾರೆ.
Advertisement
Advertisement
ಬೈಡನ್ ಎಚ್ಚರಿಕೆ:
ಶುಕ್ರವಾರ ತಡರಾತ್ರಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದ ವಿಷಯದ ಕುರಿತು ಮಾತನಾಡಿದ್ದಾರೆ. ಈ ವೇಳೆ ಇದು ಜಗತ್ತಿನಲ್ಲಿ ಅತಿ ದೊಡ್ಡ ಸಮಸ್ಯೆ. ಭಯೋತ್ಪಾದನೆಗೆ ಅಫ್ಘನ್ ನೆಲೆ ಬಳಸಲು ಬಿಡಲ್ಲ ಎಂದು ಹೇಳಿದ್ದಾರೆ. ನಮ್ಮ ಸೈನಿಕರ ಮೇಲೆ ದಾಳಿಯಾದ ಮರುಕ್ಷಣವೇ ಪ್ರತಿದಾಳಿ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್
Advertisement
Advertisement
ಬೈಡನ್ ಭರವಸೆ:
ನಾವು ಜುಲೈನಿಂದ ಇಲ್ಲಿಯವರೆಗೆ 18 ಸಾವಿರಕ್ಕೂ ಹೆಚ್ಚು ಮತ್ತು ಆಗಸ್ಟ್ 14ರ ನಂತರ 13 ಸಾವಿರ ಜನರನ್ನು ಕಾಬೂಲ್ ನಿಂದ ಸ್ಥಳಾಂತರ ಮಾಡಿದ್ದೇವೆ. ಇದು ಇತಿಹಾಸದಲ್ಲಿ ಕಂಡು ಕೇಳರಿಯದ ದೊಡ್ಡ ಸಮಸ್ಯೆಯಾಗಿದ್ದು, ದೊಡ್ಡ ಮಟ್ಟದಲ್ಲಿಯೇ ಜನರ ಏರ್ ಲಿಫ್ಟ್ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಕಾಬೂಲ್ ನಲ್ಲಿಯ ಜನರ ಏರ್ ಲಿಫ್ಟ್ ಮಾಡಲು ಅಮೆರಿಕದ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?