ನಟ ಶಿವರಾಜ್‌ಕುಮಾರ್ (Shivarajkumar) ಇಂದು (ಡಿ.18) ಚಿಕಿತ್ಸೆಗಾಗಿ ಅಮೆರಿಕಗೆ ತೆರಳಲಿದ್ದಾರೆ. ಈ ಹಿನ್ನೆಲೆ ಪೂರ್ಣಿಮಾ ರಾಮ್‌ಕುಮಾರ್ ಕುಟುಂಬವು ಸಹೋದರ ಶಿವಣ್ಣನ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಸಿನಿಮಾದಲ್ಲಿ ನಯನತಾರಾ ಐಟಂ ಡ್ಯಾನ್ಸ್?
ಇದೇ ಡಿ.24ರಂದು ಶಿವಣ್ಣಗೆ ಅಮೆರಿಕದಲ್ಲಿ ಸರ್ಜರಿ ನಡೆಯಲಿದೆ. ಹಾಗಾಗಿ ಇಂದು ರಾತ್ರಿ ಪತ್ನಿ ಮತ್ತು ಮಗಳೊಂದಿಗೆ ಯುಎಸ್‌ಗೆ ತೆರಳಲಿದ್ದಾರೆ. ಈ ಹಿನ್ನೆಲೆ ಮಕ್ಕಳಾದ ಧನ್ಯಾ, ಧಿರೇನ್ ಜೊತೆ ಸಹೋದರಿ ಪೂರ್ಣಿಮಾ (Poornima Ramkumar) ಬೆಂಗಳೂರಿನ ನಾಗವಾರದಲ್ಲಿರುವ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಶಿವಣ್ಣನ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ. ಇದೇ ವೇಳೆ, ನೆಟ್ಟನ ನಟನನ್ನು ನೋಡಲು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದಾರೆ.
ಇನ್ನೂ ಈಗಾಗಲೇ ಶಿವಣ್ಣ ಮನೆಗೆ ಸುದೀಪ್, ಬಿ.ಸಿ ಪಾಟೀಲ್, ಕೆಆರ್‌ಜಿ ರೂವಾರಿ ಕಾರ್ತಿಕ್ ಗೌಡ ಭೇಟಿಯಾಗಿದ್ದಾರೆ. ಶಿವಣ್ಣರನ್ನು ಸುದೀಪ್ ತಬ್ಬಿಕೊಂಡು ಸರ್ಜರಿ ಮುಗಿಸಿ ಆರಾಮ ಆಗಿ ಬನ್ನಿ ಎಂದು ಧೈರ್ಯ ತುಂಬಿದ್ದಾರೆ.