ಉಡುಪಿ: ಎನ್‌ಕೌಂಟರ್ (Encounter) ಆಗಿದೆ, ಜೀವವೂ ಹೋಗಿದೆ. ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ. ಸರೆಂಡರ್ ಕೊಡೋ ಪರಿಹಾರ ನಮಗೂ ಕೊಡಿ ಎಂದು ಮೃತ ನಕ್ಸಲ್ ಕಾರ್ಯಕರ್ತ ವಿಕ್ರಂ ಗೌಡ (Vikram Gowda) ಸಹೋದರಿ ಸುಗುಣ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ನಕ್ಸಲ್ ಶರಣಾಗತಿ ವಿಚಾರ ಚರ್ಚೆಯಲ್ಲಿರುವ ಸಂದರ್ಭ ಇತ್ತೀಚೆಗೆ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್ ಕಾರ್ಯಕರ್ತ ವಿಕ್ರಂ ಗೌಡ ಸಹೋದರಿ ಪ್ರತಿಕ್ರಿಯೆ ನೀಡಿದ್ದಾರೆ. ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ, ಪರಿಹಾರ ಆದ್ರೂ ನೀಡಿ ಅಂತ ಮನವಿ ಮಾಡಿದ್ದಾರೆ.
Advertisement
Advertisement
ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೂ ನಮ್ಮ ದಿನ ಸಾಗೋದಿಲ್ಲ. ಸರೆಂಡರ್ ಆಗುವವರಿಗೆ ಕೊಡೋ ಪರಿಹಾರ ನಮಗೂ ಕೊಡಿ ಸಾಕು. ನನ್ನ ಅಣ್ಣನ ಜೀವ ಕೊಡಲು ಸಾಧ್ಯವಿಲ್ಲ, ಎನ್‌ಕೌಂಟರ್ ಆಗಿದೆ ಅವರ ಜೀವ ಹೋಗಿಯಾಗಿದೆ. ಉಳಿದವರಿಗೆ ಕೊಡೋ ಪರಿಹಾರವನ್ನ ನಮಗೂ ಕೊಟ್ರೆ ಸಾಕು, ನಾವು ಕಷ್ಟದಲ್ಲಿದ್ದೇವೆ ಎಂದು ಸುಗುಣ ಕೋರಿದ್ದಾರೆ.
Advertisement
ಕಳೆದ ನವೆಂಬರ್ 19ರಂದು ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್ ಕಾರ್ಯಕರ್ತ ವಿಕ್ರಂ ಗೌಡನನ್ನು ಎನ್‌ಕೌಂಟರ್ (Encounter) ಮಾಡಿ ಹತ್ಯೆ ಮಾಡಲಾಗಿತ್ತು.
Advertisement
3 ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್ ವಾಟೆಂಡ್:
ವಿಕ್ರಂ ಗೌಡ ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆಗಿದ್ದ. ಅಲ್ಲದೇ ವಿಕ್ರಂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣ ಅರಣ್ಯ ಇಲಾಖೆಯವರು ಎಂದು ಸ್ಥಳಿಯರಾದ ವಿಕ್ರಮಾರ್ಜುನ ಹೆಗ್ಗಡೆ ʻಪಬ್ಲಿಕ್ ಟಿವಿʼಗೆ ತಿಳಿಸಿದ್ದರು.
ಸುಮಾರು 2002-03ರಿಂದ ಆತ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ. ‘ಕರ್ನಾಟಕ ವಿಮೋಚನಾ ಸಂಘ’ ಆರಂಭಿಸಿದಾಗ ಆತ ಅದರಲ್ಲಿ ಸೇರಿಕೊಂಡ. ಸಾಕೇತ್ ರಾಜನ್ ಬಂದ ನಂತರ ಅದು ನಕ್ಸಲ್‌ರ ಸಂಘ ಎನ್ನುವಂತದ್ದು ಗೊತ್ತಾಯಿತು. ಆರಂಭದಲ್ಲಿ ಅವರು ಲಾವಣಿ ಪದಗಳನ್ನು ಹಾಡುತ್ತಾ ಮನೆ ಮನೆಗೆ ಬರುತ್ತಿದ್ದರು. ತದನಂತರ ನಮ್ಮ ಊರಿನಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದರು. ನನ್ನನ್ನು ಒಮ್ಮೆ ಅವರ ಪ್ರತಿಭಟನೆಗೆ ಕರೆದಿದ್ದ ನಾನು ಹೋಗಿರಲಿಲ್ಲ. ಅದಕ್ಕಾಗಿ ನನ್ನ ಮೇಲೆ ದ್ವೇಷ ಇಟ್ಟಕೊಂಡು 2-3 ಬಾರಿ ನನ್ನ ಮನೆ ಮೇಲೆ ಪ್ರತಿಕಾರ ತೀರಿಸಲು ಮುಂದಾಗಿದ್ದ. 3-4 ಜನರ ತಂಡವನ್ನು ನಮ್ಮ ಮನೆಗೆ ದಾಳಿ ಮಾಡಲು ಕಳುಹಿಸುತ್ತಿದ್ದ. 2-3 ಬಾರಿ ನಮ್ಮ ಮನೆ ಮೇಲೆ ದಾಳಿ ಕೂಡ ಮಾಡಿದ್ದ ಎಂದು ವಿಕ್ರಮಾರ್ಜುನ ಹೇಳಿದ್ದರು.