ಗದಗ: ತಂಗಿಯನ್ನು ಗಂಡನ ಮನೆಗೆ ಬೀಡಲು ಹೋದ ಸಂದರ್ಭದಲ್ಲಿ, ಬೈಕ್‍ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಮಹ್ಮದ್ ರಫಿ(24), ಬಿಬಿಹಾಝಿರಾ ಲಂಗೋಟಿ(22) ಹಾಗೂ ಒಂದುವರೆ ವರ್ಷದ ಮಹ್ಮದ್ ಸಾಜಿಬ್ ಮೃತ ಪಟ್ಟಿದ್ದಾರೆ. ಮುಂಡರಗಿ ತಾಲೂಕಿನ ಜಾಲವಾಡಗಿ ಕ್ರಾಸ್ ಬಳಿಯ ಕಣವಿ ದುರ್ಗಾದೇವಿ ದೇವಸ್ಥಾನ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಅಣ್ಣ, ತಂಗಿ ಹಾಗೂ ಒಂದುವರೆ ವರ್ಷದ ಮಗು ಸವಾನ್ನಪ್ಪಿದ್ದಾರೆ. ಮೃತ ಬೈಕ್ ಸವಾರ ಶಿರಹಟ್ಟಿ ತಾಲೂಕಿನ ಕಣಕವಾಡ ನಿವಾಸಿಯಾಗಿದ್ದನು. ಇದನ್ನೂ ಓದಿ: ಬೋರ್ವೆಲ್ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ
ತಂಗಿ ಮತ್ತು ಅವಳ ಮುಗುವನ್ನು ಕರೆದುಕೊಂಡು ಕಣಕವಾಡ ದಿಂದ ಮುಂಡರಗಿ ಪಟ್ಟಣದತ್ತ ತೆರಳುತ್ತಿದ್ದರು. ಮುಂಡರಗಿಯಿಂದ ಶಿರಹಟ್ಟಿ ಕಡೆಗೆ ವೇಗವಾಗಿ ಸಿಮೆಂಟ್ ತುಂಬಿದ ಲಾರಿ ಬರುತ್ತಿತ್ತು. ಕವಿರ್ಂಗ್‍ನಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಡಿಕ್ಕಿ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಮುಂಡರಗಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಹಾಝಿರಾ ಸ್ವಲ್ಪ ದಿನದ ಹಿಂದೆ ಹುಷಾರ್ ಇಲ್ಲ ಅಂತ ಗಂಡನ ಮನೆ ಮುಂಡರಗಿಯಿಂದ ತವರು ಮನೆ ಕಣಕವಾಡಗೆ ಬಂದಿದ್ದರು. ತವರು ಮನೆಯ ಪ್ರೀತಿಯ ಆರೈಕೆ ಪಡೆದುಕೊಂಡು ಗಂಡನ ಮನೆ ಮುಂಡರಗಿಗೆ ತೆರಳು ಸಜ್ಜಾದರು. ಕುಟುಂಬಸ್ಥರು ನಾಳೆ ಭಾನುವಾರ ಹೋಗುವಂತೆ, ಇನ್ನೊಂದು ದಿನ ಇರು ಅಂತ ಪರಿಪರಿಯಾಗಿ ಬೇಡಿಕೊಂಡಿದ್ದರು, ಗಂಡನ ಮನೆಗೆ ಹೋಗಲೇಬೇಕೆಂದು ಬಿಬಿಹಾಝಿರಾ ಹಠ ಮಾಡಿ ಹೊರಟಿದ್ದಳು. ಅಣ್ಣ ಮಹ್ಮದ್ ರಫಿ ತನ್ನ ಮುದ್ದಿನ ತಂಗಿಯನ್ನು ಗಂಡನ ಮನೆಗೆ ಬೀಡಲು ಬೈಕನ್ನೇರಿ ಹೊರಟಿದ್ದರು. ಆದರೆ ಗಂಡನ ಮನೆ ಸೇರುವ ಮುನ್ನ ಅಣ್ಣ, ತಂಗಿ ಹಾಗೂ ತಂಗಿ ಮಗು ಈ ಮೂವರು ಮಸಣ ಸೇರಿದ್ದು ದುರಂತವಾಗಿದೆ.