ಆಸ್ತಿಗಾಗಿ ಸ್ವಂತ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ತಂಗಿ!

Public TV
1 Min Read
land

ಚಿಕ್ಕೋಡಿ: ಆಸ್ತಿಗಾಗಿ ಸ್ವಂತ ತಂಗಿಯೇ (Sister) ಅಣ್ಣನ ಮೇಲೆ ಹಲ್ಲೆ ಮಾಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ (Atahani) ಪಟ್ಟಣ ಹೊರ ವಲಯದಲ್ಲಿ ನಡೆದಿದೆ.

ಶಂಕರ್ ಭಜಂತ್ರಿ ಕುಟುಂಬದ ಮೇಲೆ ತಂಗಿ ಹಾಗೂ ಆಕೆಯ ಮಕ್ಕಳಿಂದ ಹಲ್ಲೆ (Assault) ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೂರು ಎಕರೆ ಆಸ್ತಿಯಲ್ಲಿ ಪಾಲು ನೀಡದ್ದಕ್ಕೆ ಗುಂಪು ಕಟ್ಟಿಕೊಂಡು ಬಂದು ಮಾರಕಾಸ್ತ್ರಗಳಿಂದ ತಡರಾತ್ರಿ ಮನೆಗೆ ನುಗ್ಗಿ ಆರೋಪಿಗಳು ಹಲ್ಲೆ ಮಾಡಿದ್ದಾರೆ.

 

ಗಲಾಟೆಯಲ್ಲಿ ಶಂಕರ್ ಭಜಂತ್ರಿ, ಆನಂದ ಭಜಂತ್ರಿ, ಸುಧೀರ್, ವಜ್ರಮುನಿ ಗೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರದ (Maharashtra) ಮಿರಜ್ ಆಸ್ಪತ್ರೆಗೆ ಗಾಯಾಳುಗಳು ರವಾನಿಸಲಾಗಿದೆ. ಇದನ್ನೂ ಓದಿ: ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

ಸಹೋದರಿ ಲಕ್ಷ್ಮಿ ಭಜಂತ್ರಿ ಮತ್ತು ಕುಟುಂಬಸ್ಥರಿಂದ ಹಲ್ಲೆ ಆಗಿದೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

 

Share This Article