ಉಡುಪಿ: ಪಕ್ಷೇತರ ಅಭ್ಯರ್ಥಿಯಾಗಿ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಕಣಕ್ಕಿಳಿದು ಉಡುಪಿ ವಿಧಾನಸಭೆ ಕ್ಷೇತ್ರಕ್ಕೆ ರಂಗು ಹಚ್ಚಿದ್ದಾರೆ. ಇವತ್ತು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಗಳು ಉಮೇದುವಾರಿಕೆ ಸಲ್ಲಿಸಿದ್ರು. ಪಜೇರೋ ಸ್ಪೋರ್ಟ್ಸ್ ಕಾರಲ್ಲಿ ಬಂದು ಸ್ವಾಮೀಜಿ ನಾಮಪತ್ರ ಸಲ್ಲಿಸಿದರು.
ಶಿರೂರು ಸ್ವಾಮೀಜಿ ಚುನಾವಣಾ ಅಖಾಡಕ್ಕೆ ಇಳಿಯುವ ಮೂಲಕ ಕಣ ಈ ಬಾರಿ ರಂಗೇರಿದೆ. ಮಧ್ಯಾಹ್ನ ಹನ್ನೆರಡೂವರೆ ಗಂಟೆ ಸುಮಾರಿಗೆ ತಾಲೂಕು ಕಚೇರಿಗೆ ಆಗಮಿಸಿದ ಶ್ರೀಗಳು ಚುನಾವಾಧಿಕಾರಿಗಳಿಗೆ ನಾಮಪತ್ರ ನೀಡಿದರು. ಇದಕ್ಕೂ ಮುನ್ನ ಶ್ರೀಗಳು ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನಕ್ಕೆ ಭೇಟಿ ಕೊಟ್ರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
Advertisement
ಶಿರೂರು ಶ್ರೀ ,ಅಲ್ಲಿಂದ ನೇರ ಕಾರು ಹತ್ತಿ ತಾಲೂಕು ಕಚೇರಿಗೆ ಬಂದರು. ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಪಜೇರೋ ಸ್ಪೋರ್ಟ್ಸ್ ಕಾರಿನಲ್ಲಿ ಆಗಮಿಸಿದ್ರು. ಈ ಸಂದರ್ಭ ಸ್ವಾಮೀಜಿ ಕೆಲಕಾಲ ಅಸ್ವಸ್ಥರಾದರು. ನಿರ್ಜಲೀಕರ ಶ್ರೀಗಳನ್ನು ಬಾಧಿಸಿತ್ತು.
Advertisement
Advertisement
ಸುಮಾರು ಐದು ಎಳನೀರು ನೀಡಿ ಸ್ವಾಮೀಜಿಯವರ ಆರೋಗ್ಯ ಸ್ಥಿತಿಯನ್ನು ಶಿಷ್ಯರು ಹತೋಟಿಗೆ ತಂದರು. ಅಸ್ವಸ್ಥರಾಗಿದ್ದರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊಂಚ ವಿಳಂಬವಾಯ್ತು.
Advertisement
ಈ ವೇಳೆ ಮಾತನಾಡಿದ ಅವರು ,ನಾನು ಪಕ್ಷೇತರನಾಗಿ ನಾಮಪಪತ್ರ ಸಲ್ಲಿಸ್ತಿದ್ದೇನೆ. ಈಗಾಗಲೇ ಪ್ರಚಾರ ಶುರು ಮಾಡಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಅಂದ್ರು. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಅಂತ ಹೇಳಿದರು.
ಮೋದಿ ಅಥವಾ ಅಮಿತ್ ಶಾ ಮನವೊಲಿಸಿದ್ರೆ ಈ ಕುರಿತು ಚಿಂತನೆ ನಡೆಸುತ್ತೇನೆ. ಪಕ್ಷೇತರನಾಗಿ ಗೆದ್ದರೆ ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡ್ತೇನೆ ಅಂತ ಪ್ರತಿಕ್ರಿಯೆ ನೀಡಿದ್ರು. ಉಡುಪಿ ಬಿಜೆಪಿ ಸರಿಯಿಲ್ಲ, ಅದನ್ನು ಸರಿಮಾಡಬೇಕು ಎಂಬ ಇಚ್ಚೆಯೇ ರಾಜಕೀಯ ಪ್ರವೇಶಕ್ಕೆ ಕಾರಣ ಅಂತ ಹೇಳಿದರು.
ನಾನು 40 ವರ್ಷದ ಬಿಜೆಪಿ ವೋಟರ್. ಎರಡು ಬಾರಿ ಕಾಂಗ್ರೆಸ್ ನ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿದ್ದು ಬಿಟ್ಟರೆ, ಮತ್ತೆಂದೂ ಕಾಂಗ್ರೆಸ್ ಕಡೆ ಮುಖ ಹಾಕಿಲ್ಲ ಅಂತ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಬಗ್ಗೆ ಮಾತನಾಡಲ್ಲ ಅಂತ ಹೇಳಿದರು.