ಕಾರವಾರ: ಮಳೆಯ ಅಬ್ಬರಕ್ಕೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಗೆ ದೊಡ್ಡ ವಿಘ್ನ ಎದುರಾಗಿದ್ದು ಅಬ್ಬರದ ಗಾಳಿ ಮಳೆಗೆ ಮಾರಿಕಾಂಬಾ ದೇವಿ ಗದ್ದುಗೆಯ ಮಂಟಪ ಸಂಪೂರ್ಣ ಕುಸಿದು ನೆಲಕ್ಕುರುಳಿದೆ.
Advertisement
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲೂಕಿನಾಧ್ಯಂತ ಅಬ್ಬರದ ಗಾಳಿ ಮಳೆ ಸುರಿದಿದೆ. ಮಾರಿಕಾಂಬಾ ಜಾತ್ರೆಗೆ ಹಾಕಿದ ಮಳಿಗೆಗಳು ಗಾಳಿ ಮಳೆಯ ರಭಸಕ್ಕೆ ಕಿತ್ತು ಬಿದ್ದಿದ್ದು ಬಟ್ಟೆ ಅಂಗಡಿ ಸೇರಿದಂತೆ ಹಲವು ಮಳಿಗೆಗಳಿಗೆ ಹಾನಿಯಾಗಿದೆ. ಅಲ್ಲದೇ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನೀರಿಗೆ ಆಹುತಿಯಾಗಿದೆ. ಇದನ್ನೂ ಓದಿ: ಗದ್ದುಗೆ ಏರಿದ ಶಿರಸಿ ಮಾರಿಕಾಂಬಾ – ಹರಿದುಬಂದ ಜನಸಾಗರ
Advertisement
Advertisement
ಇಂದು ಸಂಜೆ ಏಕಾಏಕಿ ಗುಡುಗು ಸಹಿತ ಅಬ್ಬರದ ಮಳೆ ಪ್ರಾರಂಭವಾಗಿದೆ. ಜಾತ್ರೆಯಾಗಿದ್ದರಿಂದ ಲಕ್ಷಾಂತರ ಜನರು ಶಿರಸಿ ನಗರದಲ್ಲಿ ಸೇರಿದ್ದರು. ದುರಾದೃಷ್ಟ ಎನ್ನುವಂತೆ ಮಾರಿಕಾಂಬಾ ದೇವಿ ಮಂಟಪ ಅಬ್ಬರದ ಗಾಳಿಗೆ ಕುಸಿದು ಬಿದ್ದಿದೆ. ಶಿರಸಿ ತಾಲೂಕಿನಲ್ಲಿ ಅಲ್ಲದೇ ಮುಂಡಗೋಡು, ಹಳಿಯಾಳ, ಸಿದ್ದಾಪುರ ಭಾಗದಲ್ಲೂ ಗುಡುಗು ಸಹಿತ ಬಾರಿ ಮಳೆಯಾಗಿದೆ. ಇದನ್ನೂ ಓದಿ: ಕಾಮಣ್ಣನ ಹಬ್ಬಕ್ಕೆ ಶಸ್ತ್ರಾಸ್ತ್ರ ಹೊರ ತರುವ ಗ್ರಾಮಸ್ಥರು
Advertisement