ತುಮಕೂರು: ಶಿರಾ ನಗರ ಸಭೆಯ ಜೆಡಿಎಸ್(JDS) ಸದಸ್ಯ ರವಿಶಂಕರ್ ಆಯ್ಕೆಯನ್ನು ಶಿರಾ(Sira) ಜೆಎಂಎಫ್‌ಸಿ ನ್ಯಾಯಾಲಯ (JMFC Court) ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.
ಚುನಾವಣಾ ಆಯೋಗಕ್ಕೆ(Election Commission) ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಪರಾಧ ಕೃತ್ಯದ ಮಾಹಿತಿಯನ್ನು ಉಲ್ಲೇಖಿಸದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ರವಿಶಂಕರ್(Ravishankar) ಆಯ್ಕೆಯನ್ನು ಅಸಿಂಧುಗೊಳಿಸಿದೆ.
Advertisement
ರವಿಶಂಕರ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಚೆಕ್ ಬೌನ್ಸ್, ಕೋಮು ಗಲಭೆ ಸೃಷ್ಟಿ, ಅಪಘಾತ ಪ್ರಕರಣಗಳು ರವಿಶಂಕರ್ ಮೇಲೆ ದಾಖಲಾಗಿತ್ತು. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಡಬೇಕು.
Advertisement
Advertisement
ರವಿಶಂಕರ್ ಈ ಎಲ್ಲಾ ಮಾಹಿತಿಗಳನ್ನು ನೀಡದೇ ಮುಚ್ಚಿಟ್ಟಿದ್ದರು. ಈ ಕಾರಣಕ್ಕೆ ಶಿರಾ ಜೆಎಂಎಫ್‌ಸಿ ಕೋರ್ಟ್‌ನ ನ್ಯಾ. ಗೀತಾಂಜಲಿ ಅವರು ವಾರ್ಡ್ ನಂಬರ್ 9 ರಿಂದ ಆಯ್ಕೆಯಾದ ರವಿಶಂಕರ್ ಸದಸ್ಯ ರದ್ದುಗೊಳಿಸಿ ಉಪ ಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು
Advertisement
ಏನಿದು ಪ್ರಕರಣ?
ರವಿಶಂಕರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ತನ್ನ ಬಳಿ 4 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಉಲ್ಲೇಖಿಸಿದ್ದರು. ಕೋಟಿಗಟ್ಟಲೇ ಆಸ್ತಿ ಇದ್ದರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಉಚಿತ ರೇಷನ್ ಪಡೆಯುತ್ತಿದ್ದರು.
ಈ ಮಾಹಿತಿ ತಿಳಿದಿದ್ದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಕೋರ್ಟ್ ಮೆಟ್ಟಿಲೇರಿದ್ದರು. ರವಿಶಂಕರ್ ನಾಮಪತ್ರದಲ್ಲಿ ಸುಳ್ಳುಮಾಹಿತಿ ನೀಡಿದ್ದಾರೆ. 2021ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ರವಿಶಂಕರ್ ಸದಸ್ಯತ್ವ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದರು.