ಸಾಮಾನ್ಯವಾಗಿ ಒಂದೊಂದು ವರ್ಗದ ಪ್ರೇಕ್ಷಕರ ನಿರೀಕ್ಷೆಗಳೂ ಒಂದೊಂದು ತೆರನಾಗಿರುತ್ತವೆ. ಕೆಲವರಿಗೆ ಡ್ಯಾನ್ಸು, ಫೈಟು ಇಷ್ಟವಾದರೆ ಮತ್ತೆ ಕೆಲ ಮಂದಿ ಸೆಂಟಿಮೆಂಟ್, ಪ್ರೀತಿ, ಹಾಸ್ಯಗಳಿಗೆ ಹಾತೊರೆಯುತ್ತಾರೆ. ಆದರೆ ಅದೆಲ್ಲದರ ಜೊತೆಗೇ ಭರ್ಜರಿ ಮನೋರಂಜನೆಯನ್ನಂತೂ ಪ್ರತಿ ಪ್ರೇಕ್ಷಕರೂ ಬಯಸುತ್ತಾರೆ. ಇಂಥಾ ಎಲ್ಲಾ ಅಂಶಗಳನ್ನೂ ಚಿತ್ರವೊಂದು ತುಂಬಿಕೊಂಡು ತೆರೆ ಕಂಡರೆ ಖಂಡಿತಾ ಎಲ್ಲ ವರ್ಗದ ಪ್ರೇಕ್ಷಕರೂ ಸಂತುಷ್ಟರಾಗುತ್ತಾರೆ. ಅಂಥಾ ಎಲ್ಲ ಗುಣಗಳಿಂದ ಸಂಪನ್ನವಾಗಿರೋ ಸಿಂಗ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
Advertisement
ಒಂದರ್ಥದಲ್ಲಿ ಸಿಂಗ ನವರಸಗಳನ್ನೂ ಮೈತುಂಬಿಕೊಂಡಿರೋ ಚಿತ್ರ. ಈಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ಇದೊಂದು ಮಾಸ್ ಚಿತ್ರ ಎಂಬ ವಿಚಾರ ಪ್ರೇಕ್ಷಕರಿಗೆ ಮನದಟ್ಟಾಗಿದೆ. ಆದರೆ ಈ ಸಿನಿಮಾದೊಳಗೆ ಸಾಹಸ, ಹಾಸ್ಯ, ಪ್ರೀತಿ, ಸೆಂಟಿಮೆಂಟ್ ಸೇರಿದಂತೆ ಸಕಲ ಅಂಶಗಳೂ ಇವೆ. ನಿರ್ದೇಶಕ ವಿಜಯ್ ಕಿರಣ್ ವರ್ಷಗಳ ಕಾಲ ಶ್ರಮ ವಹಿಸಿ ಅಷ್ಟೊಂದು ರುಚಿಕಟ್ಟಾಗಿರುವಂತೆ ಈ ಚಿತ್ರವನ್ನು ರೂಪಿಸಿದ್ದಾರಂತೆ.
Advertisement
Advertisement
ಅದರಲ್ಲಿಯೂ ವಿಶೇಷವಾಗಿ ಸಂಸಾರ ಸಮೇತರಾಗಿ ಕೂತು ನೋಡುವಂಥಾ ಚಿತ್ರವಾಗಿಯೂ ಸಿಂಗ ಮೂಡಿ ಬಂದಿದೆಯಂತೆ. ಹಳ್ಳಿ ಹಿನ್ನೆಲೆಯಲ್ಲಿ ಅರಳಿಕೊಳ್ಳೋ ಕಥೆ ಹೊಂದಿರೋ ಸಿಂಗ ಮೂಲಕ ಚಿರಂಜೀವಿ ಸರ್ಜಾ ಕೂಡಾ ಸಂಪೂರ್ಣ ಬೇರೆಯದ್ದೇ ಲುಕ್ಕಿನಲ್ಲಿ ಲಕಲಕಿಸಿದ್ದಾರೆ. ಅವರಿಗೆ ಹಳ್ಳಿ ಹುಡುಗಿಯಾಗಿ ಅದಿತಿ ಪ್ರಭುದೇವ ಸಾಥ್ ಕೊಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಕೂಡಾ ಚಿತ್ರದುದ್ದಕ್ಕೂ ಇರುವ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
Advertisement
ಮಾಸ್ ಅಂಶ ಸಿಂಗ ಚಿತ್ರದ ಪ್ರಧಾನ ಲಕ್ಷಣ. ಆದರೆ ಅದರ ಹಿನ್ನೆಲೆಯಲ್ಲಿ ಎಲ್ಲರನ್ನೂ ಕಾಡುವಂಥಾ ಹಳ್ಳಿ ಸೀಮೆಯ ಕಥೆಯಿದೆ. ಅದೆಲ್ಲವನ್ನೂ ವಿಜಯ್ ಕಿರಣ್ ವಿರಳ ಲೊಕೇಷನ್ನುಗಳಲ್ಲಿ ಸೆರೆ ಹಿಡಿದಿದ್ದಾರೆ. ಈಗ ಜಾಹೀರಾಗಿರೋ ಟ್ರೈಲರ್ ಮತ್ತು ಪೋಸ್ಟರ್‍ಗಳ ಆಧಾರದಲ್ಲಿ ಸಿಂಗ ಹೀಗೆಯೇ ಇರಬಹುದೆಂಬ ಕಲ್ಪನೆ ಬಹುತೇಕರಲ್ಲಿ ಇರಬಹುದು. ಆದರೆ ಅದನ್ನು ಮೀರಿಸುವಂಥಾ ಮರ್ಮಗಳನ್ನು ಸಿಂಗ ತನ್ನೊಳಗಿಟ್ಟುಕೊಂಡಿದೆ. ಅದೇನೆಂಬುದು ಇದೇ ತಿಂಗಳ ಹತ್ತೊಂಬತ್ತನೇ ತಾರೀಕಿನಂದು ಅನಾವರಣಗೊಳ್ಳಲಿದೆ.