ಅಂತನಾನರಿವೋ: ಸೋಮವಾರ ಮಡಗಾಸ್ಕರ್‌ನ ಈಶಾನ್ಯ ಕರಾವಳಿಯಲ್ಲಿ ಅಕ್ರಮವಾಗಿ 130 ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸರಕು ಹಡಗು ಮುಳುಗಡೆಯಾಗಿದೆ. ಅದರಲ್ಲಿ 17 ಜನರ ಮೃತದೇಹ ದೊರಕಿದ್ದು, 68 ಮಂದಿ ನಾಪತ್ತೆಯಾಗಿದ್ದಾರೆ.
ಫ್ರಾನ್ಸಿಯಾ ಎಂಬ ಹಡಗು ಸೋಮವಾರ ಮುಂಜಾನೆ ಪೂರ್ವ ಮನಾನಾರಾ ಜಿಲ್ಲೆಯ ಅಂತನಾಂಬೆ ನಗರದಿಂದ ಹೊರಟಿದ್ದು, ಸೋನಿಯೆರಾನಾ ಇಂವೊಂಗೊ ಬಂದರಿನ ಕಡೆ ಸಾಗುತ್ತಿತ್ತು. ಹಿಂದೂ ಮಹಾಸಾಗರದಲ್ಲಿ ಮುಳುಗಡೆಯಾದ ಹಡಗಿನಿಂದ 45 ಜನರನ್ನು ರಕ್ಷಿಸಲಾಗಿದೆ ಎಂದು ಮೆರಿಟೈಮ್ ಮತ್ತು ರಿವರ್ ಫೋರ್ಟ್ ಏಜೆನ್ಸಿ ವರದಿ ಮಾಡಿದೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!
ಹಡಗಿನಲ್ಲಿ ರಂಧ್ರವಿದ್ದು, ಹಡಗು ಮುಳುಗಲು ಇದುವೇ ಕಾರಣ ಎಂಬುದು ತಿಳಿದುಬಂದಿದೆ. ಹಡಗು ಮುಳುಗಲು ಪ್ರಾರಂಭವಾಗಿದ್ದರೂ ಅದು ನಮ್ಮ ಗಮನಕ್ಕೆ ಬರುವಾಗ ತಡವಾಗಿತ್ತು ಎಂದು ರಕ್ಷಣೆ ಪಡೆದ ಜನರು ತಿಳಿಸಿದ್ದಾರೆ.
ಇದು ಸರಕನ್ನು ಸಾಗಿಸುವ ಹಡಗಾಗಿ ನೋಂದಾಯಿಸಲ್ಪಟ್ಟಿತ್ತು. ಪ್ರಯಾಣಿಕರನ್ನು ಸಾಗಿಸಲು ಇದು ಅಧಿಕಾರ ಹೊಂದಿರಲಿಲ್ಲ. ರಾಷ್ಟ್ರೀಯ ನೌಕಾ ಪಡೆ ಹಾಗೂ ಕಡಲ ಏಜೆನ್ಸಿಯ ಮೂರು ದೋಣಿಗಳು ನಾಪತ್ತೆಯಾದವರ ಹುಡುಕಾಟ ಮುಂದುವರಿಸಿದೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: YouTube ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ- ಮುಂದೆ ಆಗಿದ್ದೇನು ಗೊತ್ತಾ?