Bengaluru CityCrimeDistrictsKarnatakaLatestLeading NewsMain Post

ಮಹಿಳೆಯರ ನಗ್ನ ವೀಡಿಯೋ ಮಾಡಿ ಹಣ ದೋಚುತ್ತಿದ್ದ ಬೆಂಗ್ಳೂರಿನ ಗ್ಯಾಂಗ್ ಅರೆಸ್ಟ್

- ಡಿವೋರ್ಸ್ ಆಗಿರುವ ಒಂಟಿ ಮಹಿಳೆಯರು, ವಿಧವೆಯರೇ ಇವರ ಟಾರ್ಗೆಟ್

Advertisements

– ಮಹಾಲಕ್ಷ್ಮೀ ಲೇಔಟ್ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಬೆಂಗಳೂರು: ಡಿವೋರ್ಸ್ ಆಗಿರುವ ಹಾಗೂ ಗಂಡ ಸತ್ತು ಒಂಟಿಯಾಗಿರುವ ಮಹಿಳೆಯರನ್ನ ಟಾರ್ಗೆಟ್ ಮಾಡಿ ಟ್ರ್ಯಾಪ್ ಮಾಡಿ ವಿಕೃತಿ ಮೆರೆದು ದೋಚುತ್ತಿದ್ದ ಗ್ಯಾಂಗ್‌ವೊಂದನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮಂಗಳಾ, ರವಿ, ಶಿವಕುಮಾರ್, ಶ್ರೀನಿವಾಸ್ ಬಂಧಿತ ಆರೋಪಿಗಳು. ಮಂಗಳಾ ಮತ್ತು ರವಿ ಗಂಡ ಹೆಂಡತಿಯರು. ಇವರು ಡಿವೋರ್ಸ್ ಆಗಿರುವ ಹಾಗೂ ಗಂಡ ಸತ್ತು ಒಂಟಿಯಾಗಿರುವ ಮಹಿಳೆಯರನ್ನು ಗುರುತು ಮಾಡಿ, ನಂತರ ಈ ಗ್ಯಾಂಗ್‌ನಲ್ಲಿದ್ದ ಓರ್ವ ಮಹಿಳೆ ಟಾರ್ಗೆಟ್ ಮಾಡಿದ್ದವರ ಗೆಳೆತನ ಸಂಪಾದನೆ ಮಾಡ್ತಿದ್ಲು. ಬಳಿಕ ಫೋನ್ ಮೂಲಕ ಮಾತನಾಡ್ತಿದ್ರು. ಬನ್ನಿ ಮೀಟ್ ಮಾಡೋಣ ಎಂದು ಕರೆಯುತ್ತಿದ್ದರು. ಮೀಟ್ ಮಾಡಲು ಬಂದ ನಂತರ ಮಹಿಳೆಯರನ್ನ ಕಾರಿನ ಒಳಗೆ ಬರಲು ತಿಳಿಸುತ್ತಿದ್ದರು. ಬಳಿಕ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದರು.

ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶದಕ್ಕೆ ಗ್ಯಾಂಗ್ ಕರೆದುಕೊಂಡು ಹೋಗುತ್ತಿದ್ದರು. ಬಹುತೇಕ ಬಾರಿ ತಾವರೆಕೆರೆ ಕಡೆಯ ಅರಣ್ಯ ಪ್ರದೇಶದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮಹಿಳೆಗೆ ಬಟ್ಟೆ ಬಿಚ್ಚಿಲು ಹೇಳುತ್ತಿದ್ದರು. ಒಪ್ಪದೇ ಇದ್ದಾಗ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತ್ತಿದ್ದರು. ನಂತರ ನಗ್ನ ವೀಡಿಯೋ ಮಾಡಿ ಮೊಬೈಲ್ ಇಟ್ಟುಕೊಳ್ತಿದ್ದ ಗ್ಯಾಂಗ್, ಬಳಿಕ ಈ ವಿಡಿಯೋ ಹೊರಗೆ ಬರಬಾರ್ದು ಅಂದರೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಮಹಾಲಕ್ಷ್ಮೀ ಲೇಔಟ್‌ನ ಮಹಿಳೆ ಓರ್ವರಿಂದ ಒಂದು ಚಿನ್ನದ ಚೈನ್, ಕಿವಿಯೋಲೆ, ಉಂಗುರ ಕಿತ್ತುಕೊಂಡಿದ್ದಾರೆ. ಕೊನೆಗೆ ಫೋನ್ ಫೇ ಮೂಲಕ 84 ಸಾವಿರ ರೂ.ಗಳಷ್ಟು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಮತ್ತೆ ಹಣ ಬೇಕು ಎಂದು ಎಟಿಎಂ ಕಾರ್ಡ್ ಮೂಲಕ 40 ಸಾವಿರ ಡ್ರಾ ಮಾಡಿಸಿದ್ದಾರೆ.

ನಂತರ ಮೊಬೈಲ್ ಸಿಮ್ ಕಾರ್ಡ್ ಕಿತ್ತುಕೊಂಡು ನಡುರಸ್ತೆಯಲ್ಲಿ ಬಿಟ್ಟುಹೋಗಿದ್ದರು. ಘಟನೆ ನಂತರ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಮಹಿಳೆ ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡಿದ್ದ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಎಂಟು ಮಹಿಳೆಯರಿಗೆ ಹಿಂಸೆ ನೀಡಿ ರಾಬರಿ ಮಾಡಿರುವುದನ್ನೂ ಬಯಲಿಗೆಳೆಯಲಾಗಿದೆ. 8 ಮಹಿಳೆಯರು ಹೆದರಿ ಪೊಲೀಸ್ ಠಾಣೆಗೆ ದೂರನ್ನೆ ನೀಡಿರಲಿಲ್ಲ, ಸದ್ಯ ನೊಂದ ಮಹಿಳೆಯರಿಗೆ ಘಟನೆ ನಡೆದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಮನವಿ ಮಾಡಲಾಗಿದೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button