ಸಿಂಗಲ್ ಸೇವಂತಿ ಐಟಂ ಸಾಂಗ್ ರಿಲೀಸ್

Public TV
2 Min Read
13 film 3

ಕೆ.ನರೇಂದ್ರ ಬಾಬು (K. Narendra Babu) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ರಾಘವೇಂದ್ರ ರಾಜ್ ಕುಮಾರ್, ಶ್ರುತಿ (Shruti) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘13’  ಚಿತ್ರವೀಗ ಬಿಡುಗಡೆಯ ಹಂತ  ತಲುಪಿದೆ. ಓ ಗುಲಾಬಿ, ಪಲ್ಲಕ್ಕಿಯಂಥ ಪ್ರೇಮ ಕಥೆಗಳನ್ನೇ ಮಾಡಿಕೊಂಡು ಬಂದಿದ್ದ ನರೇಂದ್ರ ಬಾಬು ಅವರು 13 ಚಿತ್ರದಲ್ಲಿ ಭಾವೈಕ್ಯತೆಯ ಸಾಮಾಜಿಕ ಸಂದೇಶವಿರುವ  ಕಥೆಯೊಂದನ್ನು ನಿರೂಪಣೆ  ಮಾಡಿದ್ದಾರೆ.  ಮನರಂಜನೆಯ ಜೊತೆ ಸಸ್ಪೆನ್ಸ್, ಥ್ರಿಲ್ಲರ್ ಕಂಟೆಂಟ್ ಕೂಡ  ಸಿನಿಮಾದಲ್ಲಿದೆ.

13 film 4

ಈ ಚಿತ್ರದ ‘ಸಿಂಗಲ್ ಸೇವಂತಿ’ ಎಂಬ ಐಟಂ ಸಾಂಗ್ (Item Song) ಬಿಡುಗಡೆ ಕಾರ್ಯಕ್ರಮ ನಡೆಯಿತು. ಲಕ್ಷ್ಮಿ ದಿನೇಶ್ ಸಾಹಿತ್ಯವಿರುವ ಈ ಹಾಡಿಗೆ ಇಂದೂ ನಾಗರಾಜ್ ದನಿಯಾಗಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್, ವಿನಯ್ ರಾಜಕುಮಾರ್, ಮುಖ್ಯ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ:‘ರಂಗಬಲಿ’ ಸಕ್ಸಸ್ ಮೀಟ್‌ನಿಂದ ನಾಗ ಶೌರ್ಯ ವಾಕ್ ಔಟ್

13 film 1

ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಬಾಬು,  ನಾನು  ಈ ಕಥೆ ಬರೆದಾಗ ಮೋಹನ್ ಪಾತ್ರಕ್ಕೆ ರಾಘಣ್ಣ (Raghavendra Rajkumar) ಒಬ್ಬರೇ ಕಣ್ಣುಮುಂದೆ ಬಂದರು‌. ನಂತರ ಶ್ರುತಿ ಅವರು ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ, ಇಬ್ಬರೂ ನಮ್ಮ ಚಿತ್ರಕ್ಕೆ ಎರಡು ಕಣ್ಣಿನ ಥರ, ಚಿತ್ರ ಮಾಡುವಾಗ ನಾನಾ ಅಡೆ ತಡೆಗಳನ್ನು ದಾಟಿ ಬಂದಿದ್ದು ಮೊದಲ ಪ್ರತಿ ನೋಡಿದಾಗ ಎಲ್ಕಾ ಮರೆತು, ತುಂಬಾ ಖುಷಿಯಾಯ್ತು. ಇದು ತಂಡದ ಸಿನಿಮಾ. ಬಾಂಬೆ ಮೂಲದ ಪ್ರೀತಿ ಗೋಸ್ವಾಮಿ  ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸ್ಲೋಗನ್ ಬಾಬು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.

13 film 2

ನಂತರ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ ಈ ಚಿತ್ರದ ಕಥೆ, ಟೈಟಲ್ ಕಥೆ  ನನಗೆ ತುಂಬಾ ಖುಷಿ ಕೊಡ್ತು. ಸಸ್ಪೆನ್ಸ್ ಇದೆ. ಚಿತ್ರ ಒಳ್ಳೆಯ ಅನುಭವ ಕೊಟ್ಟಿತು. 25 ವರ್ಷ ಆದಮೇಲೆ ಶ್ರುತಿ ಅವರ ಜೊತೆ ನಟಿಸಿದ್ದೇನೆ ಎಂದರು. ನಾಯಕಿ ಪಾತ್ರ ಮಾಡಿರುವ ಶ್ರುತಿ ಮಾತನಾಡುತ್ತ ಮೊದಲಬಾರಿಗೆ ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದೇನೆ. ನನ್ನ ಪಾತ್ರದ ಹೆಸರು  ಸಾಹಿರಾಬಾನು, ಸಿನಿಮಾ ತುಂಬಾ ಚೆನ್ನಾಗಿದೆ ಎಂದರು. ವಾಣಿಜ್ಯ ಮಂಡಳಿ ಅಧ್ಯಕ್ಷರಾದ  ಭಾಮಾ ಹರೀಶ್ ಅವರು  ಹಾಡನ್ನು ಬಿಡುಗಡೆ ಮಾಡಿದರು.  ಈ ಚಿತ್ರವನ್ನು ಅರ್ಪಿಸುತ್ತಿರುವ  ಅನಿಲ್ ಕುಮಾರ್ ಮಾತನಾಡಿ ಒಂದೊಳ್ಳೆಯ ಸಂದೇಶವಿರುವ ಸಿನಿಮಾ. ಇಡೀ ತಂಡ ಶ್ರಮಪಟ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ ಎಂದರು.

 

ನಿರ್ಮಾಪಕರಲ್ಕೊಬ್ಬರಾದ ಸಂಪತ್ ಕುಮಾರ್ ಮಾತನಾಡಿ ಸಿನಿಮಾ ಮೇಲಿನ  ಶ್ರದ್ಧೆ, ಭಕ್ತಿಯಿಂದ ಒಳ್ಳೆಯಚಿತ್ರ ನಿರ್ಮಿಸಿದ್ದೇವೆ,  ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕರ ಜೊತೆ ಈ ಹಿಂದೆ ಅಮೃತವಾಹಿನಿ ಎಂಬ ಸಿನಿಮಾ ಮಾಡಿದ್ದೆ ಎಂದರು. ಉಳಿದ  ನಿರ್ಮಾಪಕರುಗಳಾದ ಮಂಜುನಾಥ್ ಗೌಡ, ಹೆಚ್. ಎಸ್. ಮಂಜುನಾಥ್ ಹಾಗೂ ಕೇಶವ ಮೂರ್ತಿ ಮಾತನಾಡಿ ನಾವೆಲ್ಲ ಸೇರಿ ಬಹಳ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇವೆ; ಕುತೂಹಲ ಮೂಡಿಸುವ ಕಥೆಯಿದೆ.ಪ್ರೇಕ್ಷಕರು ಚಿತ್ರದ  ಪ್ರತಿ ದೃಶ್ಯವನ್ನು ಎಂಜಾಯ್ ಮಾಡುತ್ತಾರೆ ಎಂದರು. ನಟ ವಿನಯ್ ರಾಜಕುಮಾರ್ ಮಾತನಾಡಿ  ಟೀಸರ್ ನೋಡಿದಾಗಲೇ ತುಂಬಾ ಖುಷಿ ಆಗಿತ್ತು, ಗೆಲುವಿನ ಸರ್ದಾರ ಆದ ಮೇಲೆ ಶ್ರುತಿ ಹಾಗೂ ಅಪ್ಪಾಜಿ ಒಟ್ಟಿಗೆ  ನಟಿಸಿದ್ದಾರೆ ಎಂದು ಹೇಳಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article