ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿತ್ಯ ಸಿಂಗಲ್ ಡಿಜಿಟ್‍ನಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು ಒಂದೇ ದಿನ 78ಕ್ಕೆ ಏರಿರೋದ್ರಿಂದ ಜಿಲ್ಲೆಯ ಜನ ಆಂತಕಕ್ಕೀಡಾಗಿದ್ದಾರೆ.
Advertisement
ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಮೂಡಿಗೆರೆಯಲ್ಲಿ 37 ಹಾಗೂ ಚಿಕ್ಕಮಗಳೂರಿನಲ್ಲಿ 17 ಕೇಸ್ ಪತ್ತೆಯಾಗಿವೆ. ಮೂಡಿಗೆರೆಯ ಹಾಸ್ಟೆಲ್ ನಲ್ಲಿ 37 ಮಕ್ಕಳಿಗೆ ಹಾಗೂ ಚಿಕ್ಕಮಗಳೂರಿನ 15 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ – ಭಯದಲ್ಲಿ ಗ್ರಾಮದ ಜನರು!
Advertisement
Advertisement
ಜಿಲ್ಲೆಯ ಗ್ರಾಮೀಣ ಭಾಗದಲ್ಲೇ ಸೋಂಕು ಹೆಚ್ಚಾಗುತ್ತಿರುವುದು ಗ್ರಾಮೀಣ ಭಾಗದ ಜನರನ್ನ ಮತ್ತಷ್ಟು ಕಂಗೆಡಿಸಿದೆ. ಮೂಡಿಗೆರೆ ತಾಲೂಕಿನ ಬಾಳೂರಿನ ಹಾಸ್ಟೆಲ್ ನಲ್ಲಿ ಮೂವರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತು. ಹಾಸ್ಟೆಲ್ ನಲ್ಲಿದ್ದ 405 ಮಕ್ಕಳಿಗೂ ಪರೀಕ್ಷೆ ನಡೆಸಿದಾಗ 37 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿರುವ ಹಾಸ್ಟೆಲ್ ನಲ್ಲಿ ಆರೋಗ್ಯ ಇಲಾಖೆ ನಡೆಸಿದ ರ‍್ಯಾಡಮ್ ಟೆಸ್ಟ್ ನಲ್ಲಿ 17 ಮಕ್ಕಳಿಗೆ ಪಾಸಿಟಿವ್ ಪತ್ತೆಯಾಗಿದೆ.
Advertisement
ಚಿಕ್ಕಮಗಳೂರು ಹಾಗೂ ಮೂಡಿಗೆರೆ ಶಾಲೆ ಹಾಗೂ ಕಾಲೇಜಿನ ಎಲ್ಲ ಮಕ್ಕಳಿಗೂ ಹೋಂ ಐಸೋಲೇಶನ್ ಮೂಲಕ ಚಿಕಿತ್ಸೆ ಮುಂದುವರೆಸುತ್ತಿದ್ದು, ಯಾರಿಗೂ ರೋಗದ ಲಕ್ಷಣಗಳು ಇಲ್ಲವೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ-2’ಗೆ ಶೇ.50 ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರೋದು ಜಿಲ್ಲೆಯ ಜನರನ್ನ ಆತಂಕಕ್ಕೀಡು ಮಾಡಿದೆ. ಈ ಮಧ್ಯೆ ಜಿಲ್ಲೆಗೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದಲೇ ಜಿಲ್ಲೆಯಲ್ಲಿ ಕ್ರಮೇಣ ಸೋಂಕು ಹೆಚ್ಚಾಗುತ್ತಿದೆ. ಡಿಸೆಂಬರ್ 30, 31 ಹಾಗೂ ಜನವರಿ 1 ಹಾಗೂ 2 ರಂದು ಜಿಲ್ಲೆಗೆ ಅಂದಾಜು 50 ಸಾವಿರಕ್ಕೂ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹಾಗಾಗಿ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಜಿಲ್ಲೆಯ ಜನ ಆಗ್ರಹಿಸಿದ್ದಾರೆ.