ಲಕ್ನೋ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯು ತರಗತಿಗಳು ಪ್ರಾರಂಭವಾಗುವ ಮೊದಲು ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
Advertisement
ಅಲ್ಪಸಂಖ್ಯಾತರಿಗೆ ಮದರಸಾ ಶಿಕ್ಷಣ ನಿರ್ಣಾಯಕ. ರಾಷ್ಟ್ರಗೀತೆಯನ್ನು ಹಾಡಿದಾಗ ವಿದ್ಯಾರ್ಥಿಗಳು ಸಮಾಜದ ಮೌಲ್ಯಗಳನ್ನು ಕಲಿಯುತ್ತಾರೆ. ಮದರಸಾ ಶಿಕ್ಷಣದ ಉನ್ನತಿಗೆ ಸರ್ಕಾರ ಶ್ರಮಿಸುತ್ತಿದೆ. ಈಗ ಮದರಸಾ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್ ಜೊತೆಗೆ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಾರೆ ಎಂದು ಸಚಿವ ದ್ಯಾನಿಶ್ ಆಜಾದ್ ಅನ್ಸಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ನೀವು ಕೋರ್ಟ್ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ: ತಾಜ್ ಮಹಲ್ ಕುರಿತ ಅರ್ಜಿ ತಿರಸ್ಕರಿಸಿದ ಕೋರ್ಟ್
Advertisement
ಮಾರ್ಚ್ 24 ರಂದು ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ಸಭೆಯಲ್ಲಿ, ಹೊಸ ಶೈಕ್ಷಣಿಕ ವರ್ಷದಿಂದ ತರಗತಿಗಳು ಪ್ರಾರಂಭವಾಗುವ ಮೊದಲು ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಿಸಲು ನಿರ್ಧರಿಸಲಾಯಿತು.
Advertisement
Advertisement
ರಂಜಾನ್ ಪ್ರಯುಕ್ತ ಮಾರ್ಚ್ 30ರಿಂದ ಮೇ 11ರವರೆಗೆ ಮದರಸಾಗಳನ್ನು ಮುಚ್ಚಲಾಗಿತ್ತು. ಗುರುವಾರದಿಂದ ತರಗತಿಗಳು ಪುನರಾರಂಭಗೊಂಡಿವೆ. ಈಗ ಉತ್ತರ ಪ್ರದೇಶದ ಮದರಸಾಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳು ಪ್ರಾರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಹಾಡಬೇಕು ಎನ್ನಲಾಗಿದೆ. ಇದನ್ನೂ ಓದಿ: ಮೇ 17ರ ಒಳಗಡೆ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ: ಕೋರ್ಟ್