ಮುಂಬೈ: ಖ್ಯಾತ ಗಾಯಕಿ ಲತಾಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಸೆ.28ಕ್ಕೆ 90ನೇ ವರ್ಷ ವಸಂತಕ್ಕೆ ಕಾಲಿಟ್ಟಿದ್ದ ಲತಾಮಂಗೇಶ್ಕರ್ ಅವರಿಗೆ ಇಂದು ನಸುಕಿನ ಜಾವ 2 ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಸ್ಥರು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಹಿಂದಿ ಭಾಷೆಯೊಂದರಲ್ಲೇ ಸುಮಾರು 1 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಲತಾಮಂಗೇಶ್ವರ್ ಅವರು ಧ್ವನಿ ನೀಡಿದ್ದು, ಭಾರತದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಯನ್ನು 2001 ರಲ್ಲಿ ಪಡೆದಿದ್ದಾರೆ. ಒಟ್ಟಾರೆ ವಿವಿಧ ಭಾಷೆಯಲ್ಲಿ ಲತಾಮಂಗೇಶ್ಕರ್ ಅವರು 36 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ 3 ರಾಷ್ಟ್ರೀಯ ಪ್ರಶಸ್ತಿ, 6 ಫಿಲ್ಮ ಫೇರ್ ಪ್ರಶಸ್ತಿ, ಪದ್ಮವಿಭೂಷಣ್, ಪದ್ಮಭೂಷಣ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಲಭಿಸಿದೆ.
ಲತಾ ಮಂಗೇಶ್ಕರ್ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರು ಕೂಡ ಗಾಯಕರಾಗಿದ್ದು, ತಾಯಿ ಅವರು ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಪರಿಣಾಮ ಅವರಿಗೆ ಗಾಯನ ಸಹಜವಾಗಿ ಒಲಿದು ಬಂದಿತ್ತು. 60 ದಶಕದಲ್ಲಿ ಲತಾಮಂಗೇಶ್ಕರ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದರು. ಇವರು ಹಾಡಿರುವ ಹಲವು ಡ್ಯುಯೆಟ್ ಹಾಡುಗಳು ಇಂದಿಗೂ ಸೂಪರ್ ಹಿಟ್ ಸಾಲಿನಲ್ಲಿ ನಿಂತಿವೆ.
Team of Lata Mangeshkar: Lata Mangeshkar had chest infection so she was taken to Breach Candy Hospital, Mumbai today. She is now back at her home and is recovering. (file pic) pic.twitter.com/pYzmZHkthz
— ANI (@ANI) November 11, 2019