‘ಕ್ರೀವ್’ ಸಕ್ಸಸ್ ನಂತರ ಹೊಸ ಚಿತ್ರವನ್ನು ಕರೀನಾ ಕಪೂರ್ (Kareena Kapoor) ಒಪ್ಪಿಕೊಂಡಿದ್ದಾರೆ. ’ಸಿಂಗಂ ಅಗೇನ್’ (Singham Again) ಸಿನಿಮಾದಲ್ಲಿ ನಟಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ’ಸಿಂಗಂ ಅಗೇನ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದನ್ನೂ ಓದಿ:‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡ ಕಿಯಾರಾ ಅಡ್ವಾಣಿ
’ಸಿಂಗಂ ಅಗೇನ್’ ಸಿನಿಮಾದ ಟ್ರೈಲರ್ ನೋಡಿದವರಿಗೆ ಕರೀನಾ ಎಂಟ್ರಿ ಅಚ್ಚರಿ ಮೂಡಿಸಿದೆ. ಈ ಚಿತ್ರದಲ್ಲಿ ಇರುವುದು ರಾಮಾಯಣದ ಕಥೆಯಾಗಿದೆ. ಕರೀನಾ ಅವರಿ ಸೀತೆಯ ಪಾತ್ರ ಮಾಡಿದ್ದಾರೆ.
View this post on Instagram
ಶ್ರೀಲಂಕಾದಲ್ಲಿ ಇರುವ ನಟೋರಿಯಸ್ ವ್ಯಕ್ತಿಯಾಗಿ ಅರ್ಜುನ್ ಕಪೂರ್ ಜೀವ ತುಂಬಿದ್ದಾರೆ. ನಾಯಕಿಯನ್ನು ವಿಲನ್ ಅಪಹರಣ ಮಾಡಿದ ಬಳಿಕ ಆಕೆಯನ್ನು ಮರಳಿ ಕರೆದುಕೊಂಡು ಬರಲು ಲಂಕೆಗೆ ಸಿಂಗಂ ಅಜಯ್ ದೇವಗನ್ ಪ್ರಯಾಣ ಮಾಡುತ್ತಾನೆ. ಅವನಿಗೆ ಲಕ್ಷ್ಮಣ (ಟೈಗರ್ ಶ್ರಾಫ್), ಆಂಜನೇಯ (ರಣವೀರ್ ಸಿಂಗ್), ಜಟಾಯು (ಅಕ್ಷಯ್ ಕುಮಾರ್) ಮುಂತಾದವರು ಸಾಥ್ ನೀಡುತ್ತಾರೆ. ರಾಮಾಯಣದಂತೆಯೇ ಈ ಕಥೆಯನ್ನು ’ಸಿಂಗಂ ಅಗೇನ್’ ಸಿನಿಮಾದಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ತೋರಿಸಲಿದ್ದಾರೆ.
ಸೀತಾ ಮಾತೆಯನ್ನು ರಾವಣ ಅಪಹರಿಸಿಕೊಂಡು ಹೋಗುತ್ತಾನೆ. ಇದನ್ನೇ ಇಟ್ಟುಕೊಂಡು ರೋಹಿತ್ ಶೆಟ್ಟಿ ಅವರು ‘ಸಿಂಗಂ ಅಗೇನ್’ ಚಿತ್ರ ಮಾಡಿದ್ದಾರೆ. ಆದರೆ ಈ ಸಿನಿಮಾವನ್ನು ಆಧುನಿಕವಾಗಿ ಮಾಡಿದ್ದಾರೆ. ಇಲ್ಲಿ ರಾಮನಾಗಿ ಅಜಯ್ ದೇವಗನ್ ನಟಿಸಿದ್ರೆ, ಸೀತೆಯಾಗಿ ಕರೀನಾ ಕಪೂರ್ ಜೀವ ತುಂಬಿದ್ದಾರೆ. ಇನ್ನೂ ದೀಪಿಕಾ ಪಡುಕೋಣೆ ಲೇಡಿ ಸಿಂಗಂ ಆಗಿ ನಟಿಸಿದ್ರೆ, ರಣ್‌ವೀರ್ ಸಿಂಗ್ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.