– ಸುಶ್ಮಿತಾ ಕಣ್ಣು ದಾನ ಮಾಡಲು ಮುಂದಾದ ಪೋಷಕರು
ಬೆಂಗಳೂರು: ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ಹೇಳಿದ್ದೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ ನನ್ನ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಗಾಯಕಿ ಸುಶ್ಮಿತಾ ಸಹೋದರ ಯಶವಂತ್ ಹೇಳಿದರು.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶವಂತ್, ನನ್ನ ಅಕ್ಕ ಏನೂ ಹೇಳಲಿಲ್ಲ. ನಾನು ದಿನ ಕೆಲಸಕ್ಕೆ ಹೋಗುತ್ತೇನೆ. ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ನಾನು ಸುಶ್ಮಿತಾಗೆ ಹೇಳಿ ಲೈಟ್ ಆಫ್ ಮಾಡಿ ಮಲಗಿದ್ದೆ. ನಾನು ಹಾಲ್‍ನಲ್ಲಿ ಮಲಗಿದ್ದೆ. ನನ್ನ ಅಕ್ಕ ರೂಮಿನಲ್ಲಿ ಮಲಗಿದ್ದಳು. ಬೆಳಗ್ಗೆ ನನ್ನ ಮೊಬೈಲಿನಲ್ಲೇ ಅಲಾರಾಂ ಆನ್ ಆಗಿತ್ತು. ಆಗ ನಾನು ಎದ್ದು ರೂಮಿಗೆ ಹೋಗಿ ನೋಡಿದಾಗ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದರು. ಇದನ್ನೂ ಓದಿ: ‘ಅಮ್ಮಾ, ನನ್ನ ಪತಿಯನ್ನು ಸುಮ್ಮನೆ ಬಿಡಬೇಡ’ – ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ
Advertisement
Advertisement
ಮಧ್ಯರಾತ್ರಿ ಸುಮಾರು 1.30ಕ್ಕೆ ನನ್ನ ಅಕ್ಕ ಮೆಸೇಜ್ ಮಾಡಿದ್ದಾಳೆ. ಬೆಳಗ್ಗೆ ಎದ್ದು ನಾನು ರೂಮಿಗೆ ಹೋಗಿ ನೋಡಿದ್ದೆ ಆಗ ನನ್ನ ಅಕ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಷಯ ನನ್ನ ಭಾವನಿಗೆ ತಿಳಿಸಿದ್ದೇವೆ. ನನ್ನ ತಮ್ಮ ಕೂಡ ಹೋಗಿ ಹೇಳಿದ್ದಾನೆ. ಆದರೆ ಅವರು ಎಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ. ಈ ವಿಷಯ ತಿಳಿದ ತಕ್ಷಣ ನನ್ನ ಭಾವ ಓಡಿ ಹೋಗಿರಬಹುದು ಎಂದು ಯಶವಂತ್ ತಿಳಿಸಿದರು. ಇದನ್ನೂ ಓದಿ: ಹಣದ ಹಿಂದೆ ಬಿದ್ದಿದ್ದ, ಚಿನ್ನ ಮಾರಿ ಮನೆ ಖರೀದಿಸಿ ಹೊರ ಹಾಕ್ದ: ಗಾಯಕಿ ಸುಶ್ಮಿತಾ ತಾಯಿ
Advertisement
Advertisement
ಇತ್ತ ಶರತ್ ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದು, ಅವರನ್ನು ನೋಡುತ್ತಿದ್ದಂತೆ ಸುಶ್ಮಿತಾ ಕುಟುಂಬಸ್ಥರು ಮುಗಿ ಬಿದ್ದರು. ಶರತ್ ತಪ್ಪೇ ಇಲ್ಲ ಎಂದು ಆತನ ದೊಡ್ಡಮ್ಮ ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಇದನ್ನು ಕೇಳಿ ಕೋಪಗೊಂಡ ಸುಶ್ಮಿತಾ ಶರತ್ ದೊಡ್ಡಮ್ಮನ ಮೇಲೆ ಗಲಾಟೆಗೆ ಮುಂದಾದರು. ಈ ವೇಳೆ ಪ್ರಕರಣ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಇನ್ನೂ ಸುಶ್ಮಿತಾ ಸಾವಿನಲ್ಲೂ ಪೋಷಕರು ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.