ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲ (Sidhu Moosewala) ಅವರ ಮರಣದ ಎರಡು ವರ್ಷಗಳ ನಂತರ ಅವರ ತಾಯಿ ಚರಣ್ ಕೌರ್ (Charan Kaur) ಗಂಡು ಮಗುವಿಗೆ (Boy Baby) ಜನ್ಮ ನೀಡಿದ್ದಾರೆ.
ಖ್ಯಾತ ಗಾಯಕ ಸಿಧು ಮೂಸೆವಾಲ ಅವರನ್ನು ದುಷ್ಕರ್ಮಿಗಳ ಹತ್ಯೆಗೈದ ಬಳಿಕ ಚರಣ್ ಕೌರ್ ಮತ್ತೊಮ್ಮೆ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಕುರಿತು ಸಿಧು ಅವರ ತಂದೆ ಬಲ್ಕೌರ್ ಸಿಂಗ್ (Balkaur Singh) ಇನ್ಸ್ಟಾಗ್ರಾಂನಲ್ಲಿ (Instagram) ಪೋಸ್ಟ್ ಮಾಡಿದ್ದು, ಮಗುವಿನೊಂದಿಗಿರುವ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ
- Advertisement -
View this post on Instagram
- Advertisement -
ಶುಭದೀಪ್‌ನನ್ನು ಪ್ರೀತಿಸುವ ಲಕ್ಷಾಂತರ ಜನರ ಆಶೀರ್ವಾದದಿಂದ ದೇವರು ಶುಭದೀಪ್ ಅವರ ಕಿರಿಯ ಸಹೋದರರನ್ನು ನಮ್ಮ ತೋಳಿಗೆ ಹಾಕಿದ್ದಾನೆ. ವಾಹೆಗುರುಗಳ ಆಶೀರ್ವಾದದಿಂದ ಕುಟುಂಬವು ಆರೋಗ್ಯವಾಗಿದೆ ಎಂದು ಪೋಸ್ಟ್ ಹಾಕುವ ಮೂಲಕ ಮಗುವಿನ ಆಗಮನವನ್ನು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ನೇಣಿಗೆ ಶರಣು – ಕಳ್ಳತನ ಆರೋಪ ಹೊರಿಸಿ ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ್ದಕ್ಕೆ ಆತ್ಮಹತ್ಯೆ?
- Advertisement -
ಈ ಹಿಂದೆ ಸಿಧು ಅವರ ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ವಿಷಯ ಎಲ್ಲೆಡೆ ಹರಿದಾಡಿತ್ತು. ಕೆಲವರು ಇದು ಸುಳ್ಳುಸುದ್ದಿ ಎಂದು ಹೇಳಿದ್ದರು. ಇದೀಗ ಚರಣ್ ಕೌರ್ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಸಿಧು ಮೂಸೆವಾಲ ಅವರು ತನ್ನ ತಂದೆ ತಾಯಿಗೆ ಒಬ್ಬನೇ ಮಗ ಆಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ತನ್ನ ಮಗನನ್ನು ಕಳೆದುಕೊಂಡು ಅಕ್ಷರಶಃ ದುಖಸಾಗರದಲ್ಲಿ ಮುಳುಗಿದ್ದ ಅವರ ಪೋಷಕರು ಕುಟುಂಬದ ಉತ್ತರಾಧಿಕಾರಿಯ ಸಲುವಾಗಿ ಐವಿಎಫ್ (IVF) ತಂತ್ರಜ್ಞಾನದ ಮೂಲಕ ಗರ್ಭಧರಿಸಲು ನಿರ್ಧರಿಸಿದರು. ಇದನ್ನೂ ಓದಿ: ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ – ನಾಲ್ವರು ದರೋಡೆಕೋರರು ಅರೆಸ್ಟ್
- Advertisement -
2022 ರ ಮೇ 29 ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಖ್ಯಾತ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದನ್ನೂ ಓದಿ: ನನಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಬೇಡ: ಹೆಸರು ಕೈಬಿಡುವಂತೆ ಸಿಎಂಗೆ ಅಕ್ಕಯ್ ಪದ್ಮಶಾಲಿ ಪತ್ರ