ಕನ್ನಡ ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿರುವ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಎಕ್ಸ್ ಖಾತೆ ಹ್ಯಾಕ್ (Hack) ಆಗಿದೆ. ಈ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಫ್ಯಾನ್ಸ್‌ಗೆ ತಿಳಿಸಿದ್ದಾರೆ. ತಮ್ಮ ಖಾತೆಯಲ್ಲಿ ಕಾಣಿಸುವ ಯಾವುದೇ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಅಭಿಮಾನಿಗಳಿಗೆ ಗಾಯಕಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?
ಗಾಯಕಿಯ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ನನ್ನ ಎಲ್ಲಾ ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ನಮಸ್ಕಾರ, ಫೆ.13ರಂದು ನನ್ನ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಪ್ರಯತ್ನ ಮಾಡಿದರೂ ಕೂಡ ನನ್ನ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಎಕ್ಸ್ ತಂಡದಿಂದ ಕೂಡ ಯಾವುದೇ ಸಹಕಾರ ಸಿಗುತ್ತಿಲ್ಲ. ಲಾಗಿನ್ ಕೂಡ ಆಗಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಆ ಖಾತೆಯನ್ನು ಡಿಲೀಟ್ ಮಾಡೋಣವೆಂದರೆ ಅದು ಕೂಡ ಸಾಧ್ಯವಾಗುತ್ತಿಲ್ಲ ಎಂದು ಎಕ್ಸ್ ಖಾತೆ ಹ್ಯಾಕ್ ಆಗಿರುವ ಸಮಸ್ಯೆ ತೋಡಿಕೊಂಡಿದ್ದಾರೆ.
View this post on Instagram
ತಮ್ಮ ಎಕ್ಸ್ ಖಾತೆಯ ಟೈಮ್‌ಲೈನ್‌ನಲ್ಲಿ ಕಾಣಿಸುವ ಯಾವುದೇ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಫ್ಯಾನ್ಸ್‌ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಆ ಲಿಂಕ್‌ಗಳು ಸ್ಕ್ಯಾಮ್ ಆಗಿರಬಹುದು, ಕ್ಲಿಕ್ ಮಾಡುವುದರಿಂದ ನಿಮಗೂ ನಷ್ಟ ಆಗಬಹುದು ಎಂದು ಗಾಯಕಿ ಬರೆದುಕೊಂಡಿದ್ದಾರೆ. ಮತ್ತೆ ತಮ್ಮ ಖಾತೆಯು ಮರಳಿ ಪಡೆಯುವಲ್ಲಿ ಸಫಲರಾದರೆ ನಾನೇ ಲೈವ್ ಬಂದು ನನ್ನ ಅಕೌಂಟ್ ಮರಳಿ ಪಡೆದಿರುವ ವಿಚಾರವನ್ನು ಹೇಳುತ್ತೇನೆ. ಅಲ್ಲಿಯವರೆಗೂ ಯಾವ ಸುದ್ದಿಯನ್ನು ಕೂಡ ನಂಬಬೇಡಿ ಎಂದು ಶ್ರೇಯಾ ಘೋಷಾಲ್ ಮನವಿ ಮಾಡಿದ್ದಾರೆ.
ಅಂದಹಾಗೆ, ಒಂದು ಮಳೆಬಿಲ್ಲು, ಗಮನವ ಸೆಳೆಯುವ, ಉಸಿರೇ ಉಸಿರೇ, ನೀನೇ ಮೊದಲು ನೀನೇ ಕೊನೆ ಹೀಗೆ ಕನ್ನಡದ ಸಾಕಷ್ಟು ಹಾಡುಗಳನ್ನು ಹಾಡಿ ಮನರಂಜಿಸಿದ್ದಾರೆ. ಹಿಂದಿ, ಕನ್ನಡ, ತೆಲುಗು, ಹೀಗೆ ಹಲವು ಭಾಷೆಗಳಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದಾರೆ.