ಚಂಢೀಗಡ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‍ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಭಾನುವಾರ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಅವರು ಸಾಯುವ ಮುನ್ನ ದೇಸೀ ಹಾಡೊಂದನ್ನು ಹಾಡಿದ್ದರು. ಆ ಹಾಡನ್ನು ಇದೇ ಜೂನ್‍ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಲಿವುಡ್‍ನ ಖ್ಯಾತ ಗಾಯಕ ಸಲೀಮ್ ಮರ್ಚೆಂಟ್ ತಿಳಿಸಿದ್ದಾರೆ.
View this post on Instagram
Advertisement
ಸಿಧು ಅವರ ಹುಟ್ಟುಹಬ್ಬದ ಯೋಜನೆಗಳ ಬಗ್ಗೆ ಅವರು ಮಾತನಾಡಿ, ಸಿಧು ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಗಾಯಕ ತನ್ನ ಹುಟ್ಟುಹಬ್ಬದಂದು ಕೆಲವು ವಿಶೇಷ ಯೋಜನೆಗಳನ್ನು ಹೊಂದಿದ್ದರು. ಜೂನ್ 11 ರಂದು ಸಿಧು ಅವರ ಜನ್ಮದಿನ ಬರುತ್ತದೆ. ಈ ಬಾರಿ ಅವರು 29 ವರ್ಷಕ್ಕೆ ಕಾಲಿಡುತ್ತಿದ್ದರು. ಸದ್ಯದಲ್ಲೇ ಈ ಹಾಡಿನ ಪೋಸ್ಟರ್ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಅದಕ್ಕೂ ಮುನ್ನ ಇಂಥದ್ದೊಂದು ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಿಧು ಮೂಸೇವಾಲಾ ಈ ಬಾರಿ ದೇಸೀ ಪಂಜಾಬಿ ಶೈಲಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ
Advertisement
Advertisement
ಸಿಧು ತುಂಬಾ ಪ್ರೀತಿಯಿಂದ ಮಾತನಾಡುವ ಗೌರವಾನ್ವಿತ ವ್ಯಕ್ತಿ. ನಾನು ಟಿಪಿಕಲ್ ಪಂಜಾಬಿ ಹಾಡೊಂದನ್ನು ಕಂಪೋಸ್ ಮಾಡಿದ್ದೆ, ಆ ನಂತರ ಸಿಧು ಮಾತ್ರ ಈ ಹಾಡನ್ನು ಚೆನ್ನಾಗಿ ಹಾಡಬಲ್ಲ ಎಂದು ನನಗೆ ಖಾತ್ರಿಯಾಗಿತ್ತು. ಆದರೆ ದೇವರ ಇಚ್ಛೆಯ ಬೇರೆಯಾಗಿತ್ತು ಎಂದರು. ಇದನ್ನೂ ಓದಿ: ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ
Advertisement
ಸಿಧು ಅವರ ಹಾಡು ಇದೇ ಜೂನ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ಈ ಹಾಡನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಸಿಧು ಚುನಾವಣೆಯಲ್ಲಿ ಬ್ಯುಸಿಯಾದರು ಮತ್ತು ಅದರ ಬಿಡುಗಡೆಯು ಸ್ಥಗಿತಗೊಂಡಿತು. ನಂತರ ಜೂನ್‍ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು, ಆದರೆ ಅದಕ್ಕೂ ಮುನ್ನ ಈ ಅವಘಡ ಸಂಭವಿಸಿದೆ ಎಂದರು.