‘ಬ್ಯಾಂಗ್’ ಚಿತ್ರ ಒಪ್ಪಿಕೊಂಡಿದ್ಯಾಕೆ- ಸಿಂಗರ್ ಟು ಆಕ್ಟಿಂಗ್ ಜರ್ನಿ ಬಗ್ಗೆ ರಘು ದೀಕ್ಷಿತ್ ಮಾತು

Public TV
2 Min Read
raghu

ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಿಂಗರ್, ಮ್ಯೂಸಿಕ್ ಕಂಪೋಸರ್ ಆಗಿ ಗುರುತಿಸಿಕೊಂಡಿರುವ ರಘು ದೀಕ್ಷಿತ್ ಅವರು ಫಸ್ಟ್ ಟೈಮ್ ಬಣ್ಣ ಹಚ್ಚಿದ್ದ ಬಗ್ಗೆ ಅನುಭವ ಬಿಚ್ಚಿದ್ದಾರೆ. ‘ಬ್ಯಾಂಗ್’ (Bang Film) ಸಿನಿಮಾ ಮೂಲಕ ಡಾನ್ ಆಗಿ ಎಂಟ್ರಿ ಕೊಡ್ತಿರುವ ರಘು ದೀಕ್ಷಿತ್ ಅವರು ತಮ್ಮ ಮೊದಲ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

Raghu Dixit 1

ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿರುವ ರಘು ದೀಕ್ಷಿತ್ (Raghu Dixit) ಅವರಿಗೆ ಬ್ಯಾಂಗ್ ಸಿನಿಮಾಗೆ ನಟನೆಗೆ ಆಫರ್ ಸಿಕ್ಕಿದ್ದು, ಅನಿರೀಕ್ಷಿತ. ಆದರೆ ನಿದೇಶಕರು ಮೊದಲು ಭೇಟಿ ಮಾಡಲು ಬಂದಾಗ ಸಾಂಗ್ ಹಾಡೊಸೋಕೆ ಬಂದ್ರು ಎಂದು ಅಂದುಕೊಂಡಿದ್ರಂತೆ. ಕಡೆಗೆ ಸಿನಿಮಾಗೆ ಓಕೆ ಅಂದಿದ್ಯಾಕೆ? ಈ ಸಿನಿಮಾ ಯಾಕೆ ಒಪ್ಪಿಕೊಳ್ಳಬೇಕು ಎಂದು ಅನಿಸಿತು ಎಂದು ಸಂದರ್ಶನವೊಂದರಲ್ಲಿ ರಘು ದೀಕ್ಷಿತ್ ಮಾತನಾಡಿದ್ದಾರೆ.

raghu dixit 1

ಡ್ಯಾಡಿ ಹೆಸರಿನ ಡಾನ್ ಪಾತ್ರದಲ್ಲಿ ರಘು ದೀಕ್ಷಿತ್ ‘ಬ್ಯಾಂಗ್’ ಚಿತ್ರದಲ್ಲಿ ನಟಿಸಿದ್ದಾರೆ. ಶಾನ್ವಿ (Shanvi Srivastav) ಕೂಡ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರ ಮಾಡಿದ್ದಾರೆ. ಎಂದಿಗೂ ನನಗೆ ನಟನಾಗುವ ಹಂಬಲವನ್ನು ಇರಲಿಲ್ಲ. ಆದರೆ, ಅಂತಹ ಅವಕಾಶ ಸಿಕ್ಕಿದೆ ಎಂಬ ಬಗ್ಗೆ ನನಗೆ ಖುಷಿ ಇದೆ. ಮೊದಲ ಚಿತ್ರದಲ್ಲಿ ನಾನು ಗ್ಯಾಂಗ್‌ಸ್ಟರ್ ಪಾತ್ರ ಮಾಡುತ್ತಿದ್ದೇನೆ. ನಾನು ತುಂಬಾ ಅದೃಷ್ಟಶಾಲಿ ಎಂದು ರಘು ದೀಕ್ಷಿತ್ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಬಾಹುಬಲಿ ಚಿತ್ರಕ್ಕೆ ಎದುರಾಗಿ ನಿಂತ ರಂಗಿತರಂಗಕ್ಕೆ ಎಂಟು ವರ್ಷ

raghu dixit 1

ನಾನು ಈ ಚಿತ್ರದ ನಿರ್ದೇಶಕ ಗಣೇಶ್ ಪರಶುರಾಮ್ ಅವರನ್ನು ಒಮ್ಮೆ ಭೇಟಿ ಮಾಡಿದೆ. ಅವರು ಸಿನಿಮಾ ಬಗ್ಗೆ ಮಾತನಾಡುವುದಿದೆ ಎಂದಿದ್ದರು. ನನ್ನ ಬಳಿ ಸಂಗೀತ ಸಂಯೋಜನೆ ಮಾಡಿಸಬಹುದು, ಇಲ್ಲವೇ ಹಾಡು ಹಾಡಿಸಬಹುದು ಎಂದುಕೊಂಡೆ. ಆದರೆ, ಅವರು ನನ್ನ ಬಳಿ ನಟಿಸುವಂತೆ ಕೋರಿದರು. ಆದರೆ, ನಾನು ನಿರಕಾರಿಸಿದೆ. ಕೆಲ ತಿಂಗಳು ಬಿಟ್ಟು ಅವರು ಮತ್ತೆ ಆಗಮಿಸಿದರು. ನಾನು ಒಮ್ಮೆ ಕಾಸ್ಟ್ಯೂಮ್ ಧರಿಸಿ ನೋಡಿದೆ. ನನಗೆ ಅದು ನಿಜಕ್ಕೂ ಖುಷಿ ನೀಡಿತು. ಬಳಿಕ ಕಥೆ ಕೇಳಿ ಸಿನಿಮಾ ಒಪ್ಪಿಕೊಂಡೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ.

ಶಾನ್ವಿ ಶ್ರೀವಾಸ್ತವ್, ರಘು ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಸಾತ್ವಿಕಾ, ರಿತ್ವಿಕ್, ಸುನೀಲ್ ನಾಟ್ಯರಂಗ ಅವರು ಚಿತ್ರದಲ್ಲಿ ನಟಿಸಿದ್ದಾರೆ.ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ಪೂಜಾ ವಸಂತ್ ಕುಮಾರ್ ಬ್ಯಾಂಗ್ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.

Share This Article