ಲೆಜೆಂಡರಿ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ (P.Jayachandran) ಅವರು ಕನ್ನಡದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.
ಪ್ರಮುಖವಾಗಿ ಅಂಬರೀಶ್ ಅಭಿನಯದ ಒಲವಿನ ಉಡುಗೊರೆ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’, ಅಮೃತ ಘಳಿಗೆ ಸಿನಿಮಾದ ‘ಹಿಂದೂಸ್ತಾನವು ಎಂದೂ ಮರೆಯದ..’, ರಂಗನಾಯಕಿ ಸಿನಿಮಾದ ‘ಮಂದಾರ ಪುಷ್ಪವು ನೀನು..’, ಮಾನಸ ಸರೋವರದ ‘ಚಂದ..ಚಂದ..’, ಹಂತಕನ ಸಂಚು ಸಿನಿಮಾದ ‘ಜೀವನ ಸಂಜೀವನ..’. ಭಕ್ತ ಪ್ರಹ್ಲಾದ ಸಿನಿಮಾದ ‘ಕಮಲ ನಯನ.. ಕಮಲ ವದನ..’ ಪ್ರಾಯ ಪ್ರಾಯ ಪ್ರಾಯ ಸಿನಿಮಾದ ‘ಭೂಮಿ ತಾಯಾಣೆ, ನೀ ಇಷ್ಟ ಕಣೆ..’ ಹಾಗೂ ಮಸಣದ ಹೂವು ಚಿತ್ರದ ‘ಕನ್ನಡ ನಾಡಿನ ಕರಾವಳಿ..’ ಮೊದಲಾದ ಸುಪ್ರಸಿದ್ಧ ಗೀತೆಗಳಿಗೆ ಅವರು ದನಿಯಾಗಿದ್ದರು. ಇದನ್ನೂ ಓದಿ: ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ
ಮುನಿಯನ ಮದರಿ ಚಿತ್ರದ ‘ಕಾಲ್ಗೆಜ್ಜೆ ತಾಳಕೆ’, ಕಿಲಾಡಿಗಳು ಸಿನಿಮಾದ ‘ಕಾಲ ಮತ್ತೊಮ್ಮೆ ನಮಗಾಗಿ ಬಂತು’ ಮತ್ತು ‘ಅಳುಕದೆ ಬಳುಕುತ’, ಸುವರ್ಣ ಸೇತುವೆ ಚಿತ್ರದ ‘ಸಾವಿರ ಹೂಗಳಲಿ’, ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ‘ಉಯ್ಯಾಲೆ ಆಡೋಣ ಬನ್ನಿರೋ’, ಗಣೇಶನ ಮದುವೆ ಚಿತ್ರದ ‘ಶ್ರೀದೇವಿ ಮಾಧವಿ ಕಣ್ಣೋಟ ಬೇಡ’ ಮತ್ತು ‘ಪ್ರೇಮದ ಶ್ರುತಿ ಮೀಟಿದೆ’, ರೈತರ ಮಕ್ಕಳು ಸಿನಿಮಾದ ‘ಮನಸು ಕಳೆಯಿತು’ ಮೊದಲಾದ ಗೀತೆಗಳನ್ನು ಹಾಡಿ ಕನ್ನಡಿಗರ ಮನಸೂರೆಗೊಂಡಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ಗುರುವಾರ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ತ್ರಿಶೂರ್ ಅಮಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪುಟ್ಟಣ್ಣ ಕಣಗಾಲ್ ಅವರು ಒಮ್ಮೆ, ‘ಜಯಚಂದ್ರನ್ ಕನ್ನಡ ಮಾತೃಭಾಷೆಯವರಲ್ಲ ಎಂದು ಹೇಳಲು ಆಗುವುದೇ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಛತ್ತೀಸ್‌ಗಢ | ಉಕ್ಕಿನ ಸ್ಥಾವರ ಕುಸಿದು ನಾಲ್ವರು ಸಾವು; 25 ಜನ ಸಿಲುಕಿರುವ ಶಂಕೆ