ಕೋಲ್ಕತ್ತಾ: ಖ್ಯಾತ ಹಿರಿಯ ಬೆಂಗಾಲಿ ಮತ್ತು ಒಡಿಯಾ ಗಾಯಕಿ ನಿರ್ಮಲಾ ಮಿಶ್ರಾ(81) ಅವರು ಹೃದಯಾಘಾತದಿಂದ ಭಾನುವಾರ ಮುಂಜಾನೆ ಚೆಟ್ಲಾ ಪ್ರದೇಶದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ನಿರ್ಮಲಾ ಮಿಶ್ರಾ ಅವರು ಹಲವಾರು ಬೆಂಗಾಲಿ ಮತ್ತು ಒಡಿಯಾ ಚಲನಚಿತ್ರಗಳ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಕೆಲವು ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಆದರೆ ಭಾನುವಾರ ಮಧ್ಯರಾತ್ರಿ 12.05ರ ಸುಮಾರಿಗೆ ನಿರ್ಮಲಾ ಮಿಶ್ರಾ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು, ಅವರನ್ನು ಸಮೀಪದ ನರ್ಸಿಂಗ್ ಹೋಮ್‍ಗೆ ಕರೆದೊಯ್ಯಲಾಯಿತು. ಈ ವೇಳೆ ನಿರ್ಮಲಾ ಮಿಶ್ರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 1938ರಲ್ಲಿ ಜನಿಸಿದ ನಿರ್ಮಲಾ ಮಿಶ್ರಾ ಅವರು, ಸಂಗೀತ ಸುಧಾಕರ್ ಬಾಲಕೃಷ್ಣ ದಾಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಎಮಾನ್ ಏಕ್ತಾ ಜಿನುಕ್’, ‘ಬೋಲೋ ತೊ ಅರ್ಷಿ’ ಮತ್ತು ‘ಈ ಬಂಗ್ಲಾರ್ ಮತಿ ತೆ’ ಹಾಡುಗಳು ನಿರ್ಮಲಾ ಮಿಶ್ರಾ ಅವರು ಹಾಡಿರುವ ಜನಪ್ರಿಯ ಬೆಂಗಾಲಿ ಹಾಡುಗಳಲ್ಲಿ ಒಂದಾಗಿದೆ. ಜೊತೆಗೆ ಒಡಿಯಾದಲ್ಲಿ ನಿರ್ಮಲಾ ಮಿಶ್ರಾ ಅವರು ಹಾಡಿದ್ದ ‘ನಿದಾ ಭಾರ ರಾತಿ ಮಧು ಝರಾ ಜಾನ್ಹಾ’ ಮತ್ತು ‘ಮೋ ಮನ ಬೀನಾ ರಾ ತಾರೆ’ ಹಾಡುಗಳು ಸಾಕಷ್ಟು ಹಿಟ್ ಆಗಿತ್ತು.
ಸದ್ಯ ನಿರ್ಮಲಾ ಮಿಶ್ರಾ ಅವರ ಅಗಲಿಕೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ