ಮತದಾರರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಬೃಹತ್ ಬೆಂಗಳೂರು (Bangalore) ಮಹಾನಗರ ಪಾಲಿಕೆ (BBMP) ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಅದರಲ್ಲೂ ಬೆಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಇದೀಗ ಬೆಂಗಳೂರು ಐಕಾನ್ ಗಳೆಂದು (Icon) ಐವರು ಪ್ರಮುಖ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
Advertisement
ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವಂತಹ ಐದು ವ್ಯಕ್ತಿಗಳನ್ನು ಬೆಂಗಳೂರು ಐಕಾನ್ ಹೆಸರಿನಲ್ಲಿ ಆಯ್ಕೆ ಮಾಡಲಾಗಿದ್ದು, ಇವರು ಬೆಂಗಳೂರಿನ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಲಿದ್ದಾರೆ. ಈ ಐವರಲ್ಲಿ ಕನ್ನಡ ಸಿನಿಮಾ ರಂಗದ ಒಬ್ಬರು ಗಾಯಕರನ್ನು ಮತ್ತು ನಟರನ್ನು ಬಿಬಿಎಂಪಿ ಆಯ್ಕೆ ಮಾಡಿಕೊಂಡಿದೆ. ಇದನ್ನೂ ಓದಿ:ನಮ್ಮ ನಡುವೆ ಏನಿಲ್ಲ, ಡಾಲಿಗೆ ಹೆಣ್ಣು ಕೊಡುತ್ತಿಲ್ಲ: ನಟಿ ಅಮೃತಾ
Advertisement
Advertisement
ಬಾಲ್ಯದಿಂದಲೂ ಸಿನಿಮಾ ರಂಗದಲ್ಲಿ ಸಕ್ರೀಯರಾಗಿರುವ ಮಾಸ್ಟರ್ ಆನಂದ್ಅ (Master Anand)ವರನ್ನು ಬೆಂಗಳೂರು ಐಕಾನ್ ಎಂದು ಗುರುತಿಸಿರುವ ಬಿಬಿಎಂಪಿ, ಇವರ ಮೂಲಕ ಮತದಾನದ ಜಾಗೃತಿಗೆ ಮುಂದಾಗುತ್ತಿದೆ. ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆನಂದ್, ಈಗಾಗಲೇ ಅನೇಕ ಸಮಾಜಮುಖಿ ಕೆಲಸಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Advertisement
ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾದಲ್ಲಿ ಜುಂಜಪ್ಪ ಗೀತೆಯನ್ನು ಹಾಡಿರುವ ಗಾಯಕ ಮೋಹನ್ ಕುಮಾರ್ (Mohan Kumar) ಕೂಡ ಬೆಂಗಳೂರು ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. ಕಾಡುಗೊಲ್ಲರ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದಿರುವ ಮೋಹನ್ ಅವರಿಗೆ ಇತ್ತೀಚೆಗಷ್ಟೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಅತ್ಯುತ್ತಮ ಗಾಯಕ ಪ್ರಶಸ್ತಿ ನೀಡಿ ಗೌರವಿಸಿತ್ತು.