ಹೈದರಾಬಾದ್: ಖ್ಯಾತ ಗಾಯಕಿ ಮಂಗ್ಲಿ (Singer Mangli) ಬರ್ತಡೇ ಪಾರ್ಟಿ ವೇಳೆ ಪೊಲೀಸರು (Police) ದಾಳಿ ನಡೆಸಿ, ಮಾದಕ ವಸ್ತು ಸೇವಿಸಿದ್ದ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಎರ್ಲಪಲ್ಲಿರುವ ತ್ರಿಪುರಾ ರೆಸಾರ್ಟ್‍ನಲ್ಲಿ ಬರ್ತಡೇ ಪಾರ್ಟಿ ನಡೆಯುತ್ತಿತ್ತು. ಈ ವೇಳೆ, ಚೆವೆಲ್ಲಾ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗಾಂಜಾ, ವಿದೇಶಿ ಮದ್ಯ ಪತ್ತೆಯಾಗಿದೆ. ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ
ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಡಿಕಲ್ ಟೆಸ್ಟ್‌ನಲ್ಲಿ ಹಲವರು ಮಾದಕ ವಸ್ತು ಸೇವಿಸಿರೋದು ಪತ್ತೆಯಾಗಿದೆ. ಈ ಸಂಬಂಧ ಚೆವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ಪೊಲೀಸರು ವಿಡಿಯೋ ಮಾಡಿದ್ದು, ಮಂಗ್ಲಿ, ವಿಡಿಯೋ ಮಾಡೋದು ನಿಲ್ಲಿಸ್ತಿಯೋ ಇಲ್ವೋ ಎಂದು ಪೊಲೀಸರ ಮೇಲೆ ಗದರಿದ್ದಾಳೆ. ಇದಕ್ಕೆ, ನನ್ನ ಕೆಲಸ ನಾನು ಮಾಡ್ತಿದ್ದೇನೆ ಎಂದು ಪೊಲೀಸ್ ಸಿಬ್ಬಂದಿ ಉತ್ತರಿಸಿದ್ದಾರೆ. ಇದನ್ನೂ ಓದಿ: ಅಡ್ಡವಾಗಿ ಕಾಲುಗಳು, ಮೂಲೆಯಲ್ಲಿ ತಲೆ – ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ