ಕೊರೊನಾ ಸೋಂಕಿನಿಂದ ಕೆಲವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವರು ತಾವು ಮಾಡುತ್ತಿದ್ದ ವೃತ್ತಿಯನ್ನು ಬಿಟ್ಟು ಹೊಟ್ಟೆಪಾಡಿಗೆ ಏನೇನೋ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಗಾಯಕಿಯೊಬ್ಬಳು ಕೊರೊನಾ ಬಳಿಕ ಕೆಲಸವಿಲ್ಲದೆ ಫುಡ್ ಸ್ಟಾಲ್ ತೆರೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗುಜರಾತ್‍ನ ಜಾಮ್‍ನಗರದಲ್ಲಿರುವ ಗಾಯಕಿ ಫುಡ್ ಸ್ಟಾಲ್ ತೆರೆದಿದ್ದಾರೆ. ಕೆಲಸವಿಲ್ಲದೆ ಕೆಲವು ಮಹಿಳೆಯರಿಗೆ ಕೆಲಸ ಕೊಟ್ಟು ಒಂದು ಫುಡ್ ಸ್ಟಾಲ್ ಶುರು ಮಾಡಿದ್ದಾರೆ.
Advertisement
View this post on Instagram
Advertisement
ಲಾಕ್‍ಡೌನ್ ಸಮಯದಲ್ಲಿ ಹಾಡಲು ಎಲ್ಲೂ ಅವಕಾಶವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಫುಡ್ ಸ್ಟಾಲ್ ಶುರು ಮಾಡಿದೆ. ಅಂದಿನಿಂದ ಇಲ್ಲಿಯವರೆಗೂ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ. ನಾನು ಈಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ. ಕೆಲಸವಿಲ್ಲದೆ ಕೆಲವು ಮಹಿಳೆಯರಿಗೆ ಕೆಲಸ ಕೊಟ್ಟು ಒಂದು ಫುಡ್ ಸ್ಟಾಲ್ ಶುರು ಮಾಡಿದ್ದೇನೆ ಎಂದು ಗಾಯಕಿ ಹೇಳಿದ್ದಾರೆ. ಇದನ್ನೂ ಓದಿ: ಉಡ್ತಾ ಪಂಜಾಬ್ ಅಲ್ಲ, ಪ್ರಗತಿಪರ ಪಂಜಾಬ್: ಭಗವಂತ್ ಮಾನ್
Advertisement
ತಮ್ಮ ನೋವನ್ನು ಶಕ್ತಿಯಾಗಿ ಪರಿವರ್ತಿಸುವ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳು ಎಂದು ನೆಟ್ಟಿಗರೊಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಆಕೆಯ ಧ್ವನಿ ಅದ್ಭುತವಾಗಿದೆ. ಆಕೆಗೆ ಹಾಡಲು ಅವಕಾಶಗಳು ಸಿಗಬೇಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಗಾಯಕಿಯ ಈ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement