ವೇದಿಕೆ ಮೇಲೆಯೇ ಕುಸಿದು ಬಿದ್ದ ಕೆಕೆ – ಬಹುಭಾಷಾ ಖ್ಯಾತ ಗಾಯಕ ಹಠಾತ್ ನಿಧನ

Public TV
1 Min Read
kk singer 1

ನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಾಡಿ ಜನರನ್ನು ರಂಜಿಸಿದ ಖ್ಯಾತ ಗಾಯಕ ಕೆಕೆ ಎಂದೇ ಪ್ರಸಿದ್ಧಿ ಹೊಂದಿದ ಕೃಷ್ಣಕುಮಾರ್ ಕುನ್ನತ್(53) ವಿಧಿವಶರಾಗಿದ್ದಾರೆ.

ಕೃಷ್ಣಕುಮಾರ್ ಕುನ್ನತ್ ಹೆಸರಾಗಿದ್ದರೂ `ಕೆಕೆ’ ಅಂತಲೇ ಖ್ಯಾತರಾಗಿದ್ದವರು. ಮಂಗಳವಾರ ಕೊಲ್ಕತ್ತಾದ ನಜ್ರುಲಾ ಮಂಚ್ ಆಡಿಟೋರಿಯಂನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿದ್ದ ವೇಳೆ ಕುಸಿದು ಬಿದ್ದ ಕೆಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಅಷ್ಟರಲ್ಲಿ ಕೆಕೆ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಕನ್ನಡ ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ `ಮಹಾನಟಿ’ ಕೀರ್ತಿ ಸುರೇಶ್

kk singer

ಪ್ರಾಥಮಿಕ ಮಾಹಿತಿಯಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಇನ್ನು ಗಾಯಕ ಕೆಕೆ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್ ಗಣ್ಯರು, ಗಾಯಕರು ಸಂತಾಪ ಸೂಚಿಸಿದ್ದಾರೆ.

ನರೇಂದ್ರ ಮೋದಿ ಅವರು, ಕೆಕೆ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಹಾಡುಗಳು ಎಲ್ಲ ವಯೋಮಾನದ ಜನರೊಂದಿಗೆ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಅವರ ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖ ತಡೆದುಕೊಳ್ಳಲು ಶಕ್ತಿಕೊಡಲಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

kk singer 2

ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ 3 ದಶಕಗಳ ಕಾಲ ಕೆಕೆ ಹಾಡಿದ್ದರು. ಕನ್ನಡದ ರೌಡಿ ಅಳಿಯ, ಮನಸಾರೆ, ಮಳೆ ಬರಲಿ.. ಮಂಜು ಇರಲಿ ಚಿತ್ರಗಳಲ್ಲಿ ಹಾಡಿಗೆ ದನಿ ಆಗಿದ್ದಾರೆ. ಇದನ್ನೂ ಓದಿ: ಮತ್ತೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್

Share This Article
Leave a Comment

Leave a Reply

Your email address will not be published. Required fields are marked *