ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮದುವೆ ಇದೇ ಜುಲೈ 12ರಂದು ಜರುಗಲಿದೆ. ಇಂದು (ಜು.5) ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಕೆನಡಾದ ಖ್ಯಾತ ಗಾಯಕ ಜಸ್ಟಿನ್ ಬೀಬರ್ (Justin Bieber) ಕೂಡ ಹಾಜರಿ ಹಾಕಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ಹಾಡಲು 83 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ.
ಜು.4ರಂದು ಜಸ್ಟಿನ್ ಬೀಬರ್ ಅವರು ಮುಂಬೈಗೆ ಬಂದಿಳಿದಿದ್ದಾರೆ. 30 ವರ್ಷದ ಈ ಗಾಯಕ ಒಂದು ದಿನದ ಕಾರ್ಯಕ್ರಮಕ್ಕೆ ಚಾರ್ಜ್ ಮಾಡುತ್ತಿರುವ ಹಣದ ಮೊತ್ತ ಕೇಳಿ ಅನೇಕರು ಶಾಕ್ ಆಗಿದ್ದಾರೆ. 10 ಮಿಲಿಯನ್ ಅಮೆರಿಕನ್ ಡಾಲರ್ ಚಾರ್ಜ್ ಮಾಡಿದ್ದಾರೆ. ಅಂದರೆ ಭಾರತದ ರೂಪಾಯಿಗೆ ಅವರ ಸಂಭಾವನೆ ಬರೋಬ್ಬರಿ 83.51 ಕೋಟಿ ರೂ. ಆಗಲಿದೆ. ಇದನ್ನೂ ಓದಿ:ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ ಕೂದಲಿಗೆ ಬಿತ್ತು ಕತ್ತರಿ
ಜಸ್ಟಿನ್ ಬೀಬರ್ ಸಂಗೀತ ಕಾರ್ಯಕ್ರಮಕ್ಕೆ ವಿಶ್ವದ ಎಲ್ಲಾ ಕಡೆ ಭಾರೀ ಬೇಡಿಕೆಯಿದೆ. ಹಾಗಾಗಿ ಅಂಬಾನಿ ಮನೆ ಮದುವೆಗೂ ಹಾಡಲು ಅವರಿಗೆ ಬುಲಾವ್ ಬಂದಿದೆ. ಇದನ್ನೂ ಓದಿ:‘ಲವ್‌ಸ್ಟೋರಿ’ ನಿರ್ದೇಶಕನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ
ಅಂದಹಾಗೆ, ಅನಂತ್ ಮತ್ತು ರಾಧಿಕಾ (Radhika Merchant) ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ಎರಡು ಕುಟುಂಬದ ಸಮ್ಮತಿ ಪಡೆದು ಮದುವೆಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ.