ಖ್ಯಾತ ರ‍್ಯಾಪರ್, ಗಾಯಕ ಹನಿ ಸಿಂಗ್ (Honey Singh) ಕೇವಲ ಒಂದೇ ತಿಂಗಳಲ್ಲಿ 18 ಕೆ.ಜಿ ತೂಕ ಇಳಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಮೂಲಕ 95 ಕೆ.ಜಿಯಿಂದ 77 ಕೆ.ಜಿಗೆ ಇಳಿದಿದ್ದು ಹೇಗೆ ಎನ್ನೋದು ಕುತೂಹಲ ಮೂಡಿಸಿದೆ.
ಇತ್ತೀಚಿಗೆ ಹನಿ ಸಿಂಗ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಆಗ ಅಭಿಮಾನಿಗಳು ಆರೋಗ್ಯ ಸರಿಯಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಅವರು ತೂಕ ಇಳಿಸಿಕೊಂಡಿದ್ದಾರೆ ಎಂದಿದ್ದರು. ಸದ್ಯ ಈ ಕುರಿತು ಮಾಹಿತಿಯೊಂದು ಬಹಿರಂಗಗೊಂಡಿದೆ. ಅವರು ಆರೋಗ್ಯವಾಗಿದ್ದು, ವ್ಯಾಯಾಮದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ಗಂಟೆಗಟ್ಟಲೆ ಕಾದು ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ
ಇದಕ್ಕೆ ಹನಿ ಸಿಂಗ್ ಅವರು ಹಾಸ್ಯ ಮಾಡುವಂತೆ ಕುಚ್ ನಹಿ ಹುವಾ (ಏನೂ ಆಗಿಲ್ಲ) ಎಂದು ನಗುವ ಎಮೋಜಿಯೊಂದಿಗೆ ಉತ್ತರಿಸಿದ್ದಾರೆ. ತಮ್ಮ ಫಿಟ್ನೆಸ್ ಅಪ್ಡೇಟ್ ಅನ್ನು ಹಂಚಿಕೊಳ್ಳುತ್ತಾ, ಅವರು ನಾನು ಭವಿಷ್ಯದ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಹನಿ ಸಿಂಗ್ ತೂಕ ಇಳಿಸಿಕೊಂಡಿದ್ದು ಹೇಗೆ?
ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಈ ಕುರಿತು ಹನಿ ಸಿಂಗ್ ಮಾತನಾಡಿದ್ದಾರೆ. ನನ್ನ ಚಯಾಪಚಯ ಕ್ರಿಯೆ ಹೆಚ್ಚಿಸಲು ಹಾಗೂ ತೂಕ ಇಳಿಸಿಕೊಳ್ಳಲು ಹಸಿರು ದ್ರವವೊಂದನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ಚಯಾಪಚಯ ಕ್ರಿಯೆಯು ಆಹಾರದಿಂದ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬನ್ನು ನಿಮ್ಮ ದೇಹಕ್ಕೆ ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.ಇದನ್ನೂ ಓದಿ: ದಾದಾ ಫ್ಯಾನ್ಸ್‌ಗೆ ಶುಭ ಸುದ್ದಿ – ಬರುತ್ತಿದೆ ಹೊಸ ಸ್ಮಾರಕ