BollywoodCinemaLatestMain Post

ಡಿವೋರ್ಸ್ ಪಡೆಯಲು ಪತ್ನಿಗೆ ಒಂದು ಕೋಟಿ ಜೀವನಾಂಶ ನೀಡಿದ ಗಾಯಕ ಹನಿ ಸಿಂಗ್

ಪಂಜಾಬಿ (Punjabi)ಖ್ಯಾತ ಗಾಯಕ, ಬಾಲಿವುಡ್ ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಹನಿ ಸಿಂಗ್ (Honey Singh) ಕೊನೆಗೂ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ವಿಚ್ಛೇದನ ನೀಡಿದ್ದಾರೆ. ಕಳೆದ ವರ್ಷವಷ್ಟೇ ಹನಿ ಸಿಂಗ್ ಮೇಲೆ ಅವರ ಪತ್ನಿ ದೈಹಿಕ ಹಿಂಸಾಚಾರದ ಆರೋಪ ಮಾಡಿದ್ದರು. ಪತಿಯಿಂದ ತಮಗೆ ತುಂಬಾ ಹಿಂಸೆ ಆಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೆ ಹನಿ ಸಿಂಗ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ದೆಹಲಿ (Delhi) ಕೋರ್ಟ್ ನಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ (Shalini)ಯು ನ್ಯಾಯಾಧೀಶರ ಎದುರು ಸೆಟಲ್ ಮೆಂಟ್ ಮಾಡಿಕೊಂಡು, ಪತ್ನಿಗೆ ಜೀವನಾಂಶವಾಗಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಅದು ಚೆಕ್ ಮೂಲಕ ನೀಡಿದ್ದಾರೆ. 2001ರಲ್ಲಿ ಈ ಜೋಡಿ ವಿವಾಹವಾಗಿದ್ದು, ಆ ನಂತರ ಮನಸ್ತಾಪಗಳು ಬಂದಿದ್ದವು. ಕಳೆದ ವರ್ಷವಂತೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿದ್ದರು.  ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

ತಮ್ಮ ಮೇಲೆ ಪತಿ ದೈಹಿಕವಾಗಿ ಹಿಂಸೆ ಮಾಡಿದ್ದಾನೆ ಎಂದು ಶಾಲಿನಿ ಬಹಿರಂಗವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಪತ್ರವನ್ನು ಬರೆದಿದ್ದರು. ಹನಿ ಸಿಂಗ್ ಕುಟುಂಬದ ಬಗ್ಗೆಯೂ ಆರೋಪಗಳನ್ನು ಮಾಡಿದ್ದರು. ಆನಂತರ ಹನಿ ಸಿಂಗ್ ಕೂಡ ಮಾಧ್ಯಮಗಳ ಮುಂದೆ ಬಂದು ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು. ಅಲ್ಲದೇ, ಶಾಲಿನಿಯಿಂದ  ದೂರ ಹೋಗುವುದಾಗಿಯೂ ಹೇಳಿಕೊಂಡಿದ್ದರು. ಈ ಮೂಲಕ ಅವರು ಡಿವೋರ್ಸ್ ಗೆ (Divorce) ಅರ್ಜಿ ಸಲ್ಲಿಸಿದ್ದರು.

Live Tv

Leave a Reply

Your email address will not be published.

Back to top button