ಪ್ರಖ್ಯಾತ ಹಿನ್ನೆಲೆ ಗಾಯಕಿ ತಂದೆ ಶವ ರೈಲ್ವೆ ನಿಲ್ದಾಣದಲ್ಲಿ ಪತ್ತೆ!

Public TV
1 Min Read
yelahanka crime

ಬೆಂಗಳೂರು: ಪ್ರಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ತಂದೆಯ ಶವವು ಯಲಹಂಕದ ರೈಲ್ವೆ ನಿಲ್ದಾಣ ಬಳಿ ಪತ್ತೆಯಾಗಿದೆ.

ಎ.ಕೆ.ರಾವ್‌ ಅವರ ಮೃತದೇಹ ರೈಲ್ವೆ ನಿಲ್ದಾಣ ಬಳಿ ಪತ್ತೆಯಾಗಿದ್ದು, ಇವರು ತೆಲುಗು ಹಿನ್ನೆಲೆ ಗಾಯಕಿ ಹರಿಣಿ ಅವರ ತಂದೆ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ- ಬರೋಬ್ಬರಿ 850ಕ್ಕೂ ಹೆಚ್ಚು ಮೊಬೈಲ್ ಫೋನ್ ವಶಕ್ಕೆ

murder1

ಚಾಕುವಿನಿಂದ ಇರಿದ ಪರಿಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪ್ರಶ್ನೆಯಾಗಿದೆ. ಎ.ಕೆ.ರಾವ್‌ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2ನೇ ಪತ್ನಿಯ ಕತ್ತು ಕೊಯ್ದ ಪತಿ ಮಹಾಶಯ ಪರಾರಿ

POLICE JEEP

ಎ.ಕೆ.ರಾವ್‌ ಅವರು ಸದ್ದುಗುಂಟೆಪಾಳ್ಯದಲ್ಲಿ ವಂಚನೆ ಪ್ರಕರಣದ ಆರೋಪಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಇದು ಕೊಲೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
Leave a Comment

Leave a Reply

Your email address will not be published. Required fields are marked *