ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಸಿಂಗರ್ ಹನುಮಂತ ಸರ್ಪ್ರೈಸ್

Public TV
2 Min Read
HANUMANTHA

ಹುಡುಗಿಗೋಸ್ಕರ ಯರ‍್ಯಾರೋ ಬದಲಾಗೋದನ್ನ ನೋಡಿರ್ತೀವಿ, ಈಗ ಜವಾರಿ ಸಿಂಗರ್ ಹನುಮಂತನ (Singer Hanumantha) ಸರದಿ, ಬ್ಯಾಚುಲರ್ ಬೇಡಿಯಿಂದ ಹೊರಬಂದು ಜಂಟಿಯಾಗಿರೋ ಕುರಿಗಾಹಿ ಈಗ ಆಸಿಯಾ ಬೇಗಂಗೆ ಜೋಡಿ. ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಹನುಮಂತ ಕೊರಿಯನ್ ಡ್ಯಾನ್ಸ್ ಮಾಡಿದ್ದಾನೆ.

hanumantha

ಕಿರುತೆರೆಯ ಸರಿಗಮಪ ರಿಯಾಲಿಟಿ ಶೋನಲ್ಲಿ ತನ್ನ ಗಾಯನದ ಮೂಲಕ ಮನೆ ಮಾತಾದ ಹನುಮಂತ ಈಗ ಬದಲಾಗಿದ್ದಾರೆ. ಸಿಂಗರ್ ಟು ಭರ್ಜರಿ ಬ್ಯಾಚುಲರ್ಸ್ ಅಡ್ದಾಗೆ ಹನುಮ ಲಗ್ಗೆ ಇಟ್ಟಿದ್ದಾರೆ. ಇದೇ ನೋಡಿ ಹನುಮಂತನ ಚೇಂಜ್‌ಓವರ್…ಸಂತ ಶಿಶುನಾಳ ಶರೀಫರ ಹಾಡು ಹೇಳೋಕೂ ಸೈ ಕೊರಿಯನ್ ಹಾಡಿಗೆ ಡಾನ್ಸ್ ಮಾಡೋಕೂ ಸೈ ಅನ್ನೋದನ್ನ ಸಾಬೀತು ಮಾಡಿದ್ದಾನೆ. ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ಸಿಂಗರ್ ಹನುಮಂತನ ಬದಲಾದ ಝಲಕ್ ನೋಡುಗರನ್ನ ಮೋಡಿ ಮಾಡ್ತಿದೆ.

HANUMANTHA

ಕಳೆದ ವಾರದ ಸಂಚಿಕೆಯಲ್ಲಿ ಹನುಮಂತ ರ‍್ಯಾಂಪ್‌ವಾಕ್ ಮಾಡಿ ಸೈ ಎನ್ನಿಸಿಕೊಂಡಿದ್ದ. ಅಷ್ಟಕ್ಕೂ ಕೊರಿಯನ್ ಲುಕ್ ಕೊರಿಯನ್ ಹಾಡು…ಕೊರಿಯನ್ ಡ್ಯಾನ್ಸ್ ಹಿಂದ್ಯಾಕೆ ಹನುಮಂತ ಬಿದ್ದ ಅನ್ನೋದಾದ್ರೆ ಅದು ಹುಡುಗಿಗಾಗಿ. ಭರ್ಜರಿ ಬ್ಯಾಚುಲರ್ಸ್‌ ಜೋಡಿಯಾಗಿರುವ ಆಸಿಯಾ ಬೇಗಂಗೆ (Asiya Begum) ಕೊರಿಯನ್ ಬಾಯ್ ಅಂದ್ರೆ ಇಷ್ಟವಂತೆ, ಆಸಿಯಾಳನ್ನ ಇಂಪ್ರೆಸ್ ಮಾಡೋಕೆ ಹನುಮಂತ ಈ ಅವತಾರ ಎತ್ತಿದ್ದಾನೆ.

HANUMANTHA

ಹಾಡೋಕೂ ಸೈ ಕುಣಿಯೋಕೂ ಸೈ ಎನ್ನುತ್ತಿದ್ದಾನೆ ಹನುಮಂತ, ಐದನೇ ಕ್ಲಾಸ್ ಓದಿರೋ ಬಡ್ನಿ ಹೈದನಿಗೆ ಇಂಗ್ಲೀಷ್ ಹಾಡು ಹಾಡೋಕೆ ಬರೋಲ್ಲ. ಆದರೂ ಜೋಡಿ ಆಸಿಯಾಯಾಗಿ ತಾನೇ ಪದಕಟ್ಟಿ ಹಾಡು ಹಾಡಿ ಒಲಿಸಿಕೊಂಡಿದ್ದಾನೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

ಸುಂದರ ಹುಡುಗಿಯರ ಜೊತೆ ಹನುಮಂತ ವೇದಿಕೆಗೆ ಜಬರ್ದಸ್ತ್ ಎಂಟ್ರಿ ಕೊಟ್ರು ಆಸಿಯಾಳ ಮನ ಗೆದ್ದಿದ್ದಾನೆ. ಹೂಗಳನ್ನ ನೀಡಿ ಪ್ರೇಮನಿವೇದನೆ ಮಾಡಿದ್ದಾನೆ. ಆಸಿಯಾ ಕೂಡ ಹನುಮಂತನ ಹೊಸ ಬದಲಾವಣೆ ಕಂಡು ಫುಲ್ ಖುಷ್. ಕೊರಿಯನ್ ಬಾಯ್ ಥರ ಹುಡುಗ ಬೇಕು ಎಂದಿದ್ದ ಆಸಿಯಾಗೆ ಅಪ್ಪಟ ಕನ್ನಡಿಗ ಸಿಕ್ಕಿದ್ದಾನೆ. ಹೀಗಾಗೇ ತಾಂಡಾದ ಈ ಹೈದನನ್ನ ತಿದ್ದಿ ತಿದ್ದಿ ಬದಲಾಯಿಸುತ್ತಿರೋದು ಆಸಿಯಾ ಬೇಗಂ. ಇದೊಂದು ಟಾಸ್ಕೇ ಆಗಿದ್ದರೂ ಪಂಚೆ ಮೇಲಿನ ಪ್ರೀತಿ ತೊರೆದು ಹನುಮಂತ ಬದಲಾಗಿರೋದನ್ನ ನೋಡೋದೇ ಚೆಂದ ಏನಂತೀರಿ.

Share This Article